ನೆಲ್ಯಾಡಿ : ಪಾದಯಾತ್ರೆ ಬರುವ ಭಕ್ತಾದಿಗಳಿಗೆ ಮಂಗಳೂರು ವಿಭಾಗ ಅರಣ್ಯ ಇಲಾಖೆ ವಿನೂತನ ಜಾಗೃತಿ ಕಾರ್ಯಕ್ರಮ

ಶೇರ್ ಮಾಡಿ

ನೇಸರ ಫೆ.26: ಮಾರ್ಚ್ 1 ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಭಕ್ತಾದಿಗಳು ಶಿರಾಡಿ ಮತ್ತು ಚಾರ್ಮಾಡಿ ಘಾಟ್ ಪ್ರದೇಶದ ರಸ್ತೆಗಳಲ್ಲಿ ಬೇರೆ ಬೇರೆ ಊರುಗಳಿಂದ ಪಾದಯಾತ್ರೆ ಮೂಲಕ ಬರುವಂತಹ ಯಾತ್ರಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಫೆ.27 ರಿಂದ ಮಾರ್ಚ್ 2ರ ವರೆಗೆ ಅರಣ್ಯ ಇಲಾಖೆಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಯಕ್ಷಗಾನ ವೀಕ್ಷಿಸಿ Subscribers ಮಾಡಿ

ಕಾಡು ಪ್ರಾಣಿಗಳಿಂದ ಯಾವುದೇ ರೀತಿಯಾದ ಸಮಸ್ಯೆ ಉಂಟಾಗಬಾರದೆಂಬ ಉದ್ದೇಶದಿಂದ ಹಾಗೂ ಭಕ್ತಾದಿಗಳು ಘನತ್ಯಾಜ್ಯಗಳಾದ ನೀರಿನ ಪ್ಲಾಸ್ಟಿಕ್ ಬಾಟಲಿಗಳು,ಇನ್ನಿತರ ಪರಿಸರಕ್ಕೆ ಹಾನಿಕಾರವಾದ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬಾರದೆಂಬ ಉದ್ದೇಶದಿಂದ “ಕಸವನ್ನು ಇಲ್ಲಿ ಹಾಕಿ” ಎಂಬ ನಾಮಫಲಕವನ್ನುಳ್ಳ ಕಸದ ಬುಟ್ಟಿಯನ್ನು ದಾರಿಯುದ್ದಕ್ಕೂ ಅಲ್ಲಲ್ಲಿ ನಿರ್ಮಿಸಿದ್ದಾರೆ.

ಅಲ್ಲದೆ ಅರಣ್ಯ ಇಲಾಖೆಯ ಉಪ್ಪಿನಂಗಡಿ ಹಾಗೂ ಬೆಳ್ತಂಗಡಿ ವಲಯದ ಮುಖಾಂತರ 8 ಸ್ಟಾಲ್ ಗಳನ್ನು ನಿರ್ಮಿಸಿ.ಸ್ಥಳೀಯ ಸ್ವಯಂಸೇವಕರ ಸಹಾಯದಿಂದ ರಾತ್ರಿ-ಹಗಲು ಇಲಾಖಾ ಸಿಬ್ಬಂದಿಗಳು ಪ್ಲಾಸ್ಟಿಕನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರಕ್ಕೆ ಹಾಗೂ ಅರಣ್ಯಕ್ಕೆ ಆಗುವ ಹಾನಿಯ ಬಗ್ಗೆ ಪಾದಯಾತ್ರಿಗಳಿಗೆ ಮಾಹಿತಿಯನ್ನು ನೀಡುವುದರೊಂದಿಗೆ, ಕುಡಿಯಲು ನೀರಿನ ವ್ಯವಸ್ಥೆಯನ್ನು ಮಾಡುವುದರ ಮೂಲಕ,ವಿನೂತನ ರೀತಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಯಾತ್ರಿಗಳಿಗೆ ನೆರವಾಗುವ ರೀತಿಯಲ್ಲಿ ಮಾಡಿಕೊಂಡಿದ್ದೇವೆ ಎಂಬುದಾಗಿ ನೇಸರ ನ್ಯೂಸ್ ಗೆ ವಲಯ ಉಪ ವಲಯಅರಣ್ಯಾಧಿಕಾರಿ ಸಂದೀಪ್ ತಿಳಿಸಿದರು.ಈ ಸಂದರ್ಭದಲ್ಲಿ ಅರಣ್ಯ ರಕ್ಷಕ ರಾಜೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅರಣ್ಯ ಇಲಾಖೆಯ ಜನಪರ ಕಾರ್ಯಕ್ಕೆ ಎಲ್ಲಾ ಕಡೆಯಿಂದ ಮೆಚ್ಚಿಗೆಯ ಪ್ರಶಂಸನೀಯ ಮಾತುಗಳು ಕೇಳಿಬರುತ್ತಿದೆ.

—ಜಾಹೀರಾತು—

Leave a Reply

error: Content is protected !!