ಕೊಕ್ಕಡ : ಅರಸಿನಮಕ್ಕಿ ನಾಝಿಂ ಶಾ ಹಾಗೂ ಬೀರಾನ್ ವಲಿಯುಲ್ಲಾಹಿ ಅವರ ಪವಿತ್ರ ಸಾನಿಧ್ಯದಲ್ಲಿ ರಹ್ಮಾನಿಯಾ ಮಸೀದಿ ಹಾಗೂ ಖಲಂದರ್ ಶಾ ಎಜುಕೇಶನಲ್ ಸಮಿತಿಯ ಆಶ್ರಯಲ್ಲಿ ಈದ್ ಮಿಲಾದ್ ಕಾರ್ಯಕ್ರಮ ನೆರವೇರಿತು.
ಮೊಹಲ್ಲಾಗಳ ಹಲವಾರು ಉಲಮಾ, ಉಮಾರಗಳು, ವಿಧ್ಯಾರ್ಥಿಗಳು ಹಾಗೂ ಸಹೋದರಿಯರು ಭಾಗವಹಿಸಿದರು. ಮದ್ರಸ ಮಕ್ಕಳಿಂದ ಬುರ್ದಾ ಮಜ್ಲಿಸ್, ಮದ್ಹ್ ಕೀರ್ತನೆಗಳು, ಭಾಷಣಗಳು, ಉಪ್ಪಿನಂಗಡಿ ಕುದ್ಲೂರು ಮದ್ರಸ ಮಕ್ಕಳ ಅತ್ಯಾಕರ್ಷಕ ಧಪ್ ಪ್ರದರ್ಶನ ನಡೆಯಿತು.
ಎಸ್.ಬಿ ದಾರಿಮಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಇಮಾಂ ಉಮ್ಮರ್ ಮುಸ್ಲಿಯಾರ್ ಉದ್ಘಾಟಿಸಿದರು. ಕೊಕ್ಕಡ ಖತೀಬ್ ಸುಲ್ತಾನ್ ದಾರಿಮಿ ದುಹಾ ಗೈದರು, ಸಮಿತಿ ಅಧ್ಯಕ್ಷ ನೆಲ್ಯಾಡಿ ರಝಾಕ್ ಕರಾವಳಿ, ಕಾರ್ಯದರ್ಶಿ ದಾವೂದ್ ಹೊಸ ಮಠ, ಕೋಶಾಧಿಕಾರಿ ಉಮ್ಮರ್ ಬೈಲಂಗಡಿ, ಉಫಾಧ್ಯಕ್ಷ ಕೆ.ಕೆ ಅಬೂಬಕರ್ ಕೋಲ್ಪೆ, ವಿಖಾಯ ನಾಯಕ ಇಸ್ಮಾಯಿಲ್ ತಂಙಲ್, ಉದ್ಯಮಿ ಕರಾವಳಿ ಹಮೀದ್ ಉಪ್ಪಿನಂಗಡಿ, ಯೂಸುಪ್ ಹಾಜಿ ಪೆದ್ಮಲೆ, ಪಯಾಝ್ ಯುಟಿ, ಶರೀಫ್ ಮಠ, ಮೊಹಿಯದ್ದೀನ್ ಪುತ್ತು ಅಸರ್, ಡ್ರಸ್ ವೆಲ್ ರಝಾಕ್, ಕೆ.ಕೆ ಉಸ್ಮಾನ್ ಹಾಜಿ ಕೋಲ್ಪೆ, ಶುಕೂರ್ ನೆಲ್ಯಾಡಿ, ಹನೀಫ್ ದಾರಿಮಿ ಕುಂತೂರು, ಮುಹಮ್ಮದಲಿ ಉಸ್ತಾದ್ ಜೋಗಿಬೆಟ್ಟು, ಉಸ್ಮಾನ್ ಸಹದಿ ನೆಲ್ಯಾಡಿ, ಹನೀಫ್ ಪಟ್ರಮೆ, ಕೊಕ್ಕಡ ಮಸೀದಿ ಅಧ್ಯಕ್ಷ ಹೈದರ್, ಮುಹಮ್ಮದ್ ಕೂಟೇಲು, ಮುಸ್ತಫ ಪೈಝಿ ಬೋಳದ ಬೈಲು, ಹಾಶಿಮ್ ಪೈಝಿ ಮಲ್ಲಿಗೆ ಮಜಲು, ತಮೀಮ್ ಅನ್ಸಾರಿ ಪಟ್ರಮೆ, ಮಜೀದ್ ಅಸರ್, ಹೈದರ್, ಅಬ್ಬಾಸ್, ಅಬೂಬಕರ್ ಅರಸಿನಮಕ್ಕಿ, ಹಮೀದ್ ಕೋಲ್ಪೆ, ಮುಸ್ಥಫ ಮಲ್ಲಿಗೆ ಮೊದಲಾದವರು ಉಪಸ್ಥಿತರಿದ್ದರು. ಅಬ್ಬಾಸ್ ಅರಸಿನಮಕ್ಕಿ ಸ್ವಾಗತಿಸಿದರು. ಯೂಸುಪ್ ಕೊಕ್ಕಡ ವಂದಿಸಿದರು.