ನೆಲ್ಯಾಡಿ ಪ್ರಾ.ಕೃ.ಪ.ಸ.ಸಂಘದ ಶಿರಾಡಿ ಶಾಖೆ `ಕಲ್ಪತರು ಸಹಕಾರಿ ಸೌಧ’ ನಾಳೆ ಲೋಕಾರ್ಪಣೆ

ಶೇರ್ ಮಾಡಿ

ನೆಲ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.) ಇದರ ಶಿರಾಡಿ ಶಾಖೆಯ ನೂತನ ‘ಕಲ್ಪತರು ಸಹಕಾರಿ ಸೌಧ’ದ ಲೋಕಾರ್ಪಣೆ ಸಮಾರಂಭ ಅ.7ರಂದು ಸೋಮವಾರ ನಡೆಯಲಿದೆ.

ಬೆಳಗ್ಗೆ 10 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ರಾಜ್ಯ ಸಹಕಾರಿ ಮಾರಾಟ ಮಹಾಮಂಡಲದ ಅಧ್ಯಕ್ಷರಾದ ಸಹಕಾರಿ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸೌಧವನ್ನು ಉದ್ಘಾಟಿಸಲಿದ್ದಾರೆ. ಶಾಖಾ ಕಚೇರಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಉದ್ಘಾಟಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಬ್ಯಾಂಕ್‌ನ ಇನ್ನೊಬ್ಬ ನಿರ್ದೇಶಕರಾದ ಎಸ್.ಬಿ.ಜಯರಾಮ ರೈ ಉದ್ಘಾಟಿಸಲಿದ್ದಾರೆ. ಮಂಗಳೂರಿನ ಸಹಕಾರಿ ಸಂಘಗಳ ಉಪ ನಿಬಂಧಕರಾದ ರಮೇಶ್ ಎಚ್. ಎನ್. ನ್ಯಾಯಬೆಲೆ ಅಂಗಡಿ ಉದ್ಘಾಟಿಸಲಿದ್ದಾರೆ. ಕಲ್ಪತರು ಸಹಕಾರಿ ಸೌಧದಲ್ಲಿ ನಡೆಯುವ ಕ್ಯಾಂಪ್ಕೋ ಸಂಸ್ಥೆಯ  ಖರೀದಿ ಕೇಂದ್ರವನ್ನು ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ ಉದ್ಘಾಟಿಸಲಿದ್ದಾರೆ. ರಸಗೊಬ್ಬರ ಗೋದಾಮವನ್ನು ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕುಶಾಲಪ್ಪ ಗೌಡ ಪೂವಾಜೆ ಉದ್ಘಾಟಿಸಲಿದ್ದಾರೆ.  ಪುತ್ತೂರು ಉಪ ವಿಭಾಗದ ಸಹಕಾರಿ ಸಂಘಗಳ ಉಪ ನಿಬಂಧಕರಾದ ರಘು ಎಸ್.ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ನೆಲ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.) ಇದರ  ಅಧ್ಯಕ್ಷರಾದ ಉಮೇಶ್ ಶೆಟ್ಟಿ ಎಸ್. ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ.

ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ದಯಾಕರ ರೈ ಕೆ.ಎಂ., ಉಪಾಧ್ಯಕ್ಷರಾದ ಕಮಲಾಕ್ಷ ಗೌಡ, ನಿರ್ದೇಶಕರುಗಳಾದ ಜಯಾನಂದ ಪಿ., ಬಾಲಕೃಷ್ಣ ಬಿ., ಸರ್ವೋತ್ತಮ ಗೌಡ, ಪ್ರಶಾಂತ್ ರೈ, ಸುದರ್ಶನ್, ವಸಂತ ಎಸ್., ಉಚಾ ಅಂಚನ್, ಸುಲೋಚನಾ ಡಿ., ಅಣ್ಣು ಬಿ., ಸುಮಿತ್ರ, ಗುರುರಾಜ ಭಟ್ ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಸ್ವಂತ ಕಟ್ಟಡದ ಕನಸು ನನಸು
ನೆಲ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.)ವು ನೆಲ್ಯಾಡಿ, ಕೌಕ್ರಾಡಿ, ಶಿರಾಡಿ, ಗೋಳಿತೊಟ್ಟು, ಕೊಣಾಲು, ಅಲಂತಾಯ, ಇಚ್ಲಂಪಾಡಿ  ಗ್ರಾಮಗಳ ವ್ಯಾಪ್ತಿ ಹೊಂದಿದೆ. ಸಂಘವು ಲಾಭದಲ್ಲಿ ಮುನ್ನಡೆಯುತ್ತಿದ್ದು,  ಪ್ರಸಕ್ತ ವರ್ಷ ಶೇ. 100 ಸಾಲ ವಸೂಲಾತಿ ನಡೆದಿದೆ.
ಸಂಘದ ಶಿರಾಡಿ ಶಾಖೆಯು 1973ರ ಸೆ.3ರಂದು ಆರಂಭಗೊಂಡಿದ್ದು, ಇದುವರೆಗೆ ಬಾಡಿಗೆ ಕಟ್ಟಡದಲ್ಲಿ  ಕಾರ್ಯಾಚರಿಸುತ್ತಿತ್ತು. ಪ್ರಸ್ತುತ 1.52 ಕೋಟಿ ರೂ. ವೆಚ್ಚದಲ್ಲಿ ಕಲ್ಪತರು ಸಹಕಾರಿ ಸೌಧ ಎಂಬ ಹೆಸರಿನಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಈ ಮೂಲಕ ಸ್ವಂತ ಕಟ್ಟಡದ ಕನಸು ನನಸಾಗಿದೆ. ಇದು  6037 ಚದರ ಅಡಿ ವಿಸ್ತೀರ್ಣ ಹೊಂದಿದೆ.
ಸಂಘದಲ್ಲಿ  873 ಲಕ್ಷ  ರೂ. ಪಾಲು ಬಂಡವಾಳ,  29.82 ಕೋಟಿ  ರೂ. ರೇವಣಿ ಹೊಂದಿದೆ. ಜಿಲ್ಲಾ  ಕೇಂದ್ರ ಸಹಕಾರಿ ಬ್ಯಾಂಕಿನಿಂದ 61.69 ಕೋಟಿ  ಸಾಲ  ಹೊಂದಿದೆ. ಸದಸ್ಯರ ಹೊರಬಾಕಿ ಸಾಲ 79.99 ಕೋಟಿ  ರೂ. ಇದೆ.  29 ವರ್ಷಗಳಿಂದ ನೆಲ್ಯಾಡಿ ಸಿ.ಎ. ಬ್ಯಾಂಕ್ ಅಧ್ಯಕ್ಷರಾಗಿ ಸಹಕಾರಿ ಧುರೀಣ ಉಮೇಶ್ ಶೆಟ್ಟಿ ಪಟ್ಟೆ ಸೇವೆ ಸಲ್ಲಿಸುತ್ತಿದ್ದಾರೆ.

ಶಿರಾಡಿ ಶಾಖೆಯು ಪೂರ್ಣ ಪ್ರಮಾಣದ ವ್ಯವಹಾರದ ಶಾಖೆಯಾಗಿದೆ.  ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಪಾದಾರ್ಪಣೆಯಾಗುತ್ತಿದೆ. ನನ್ನ 3 ದಶಕಗಳ ಅಧ್ಯಕ್ಷಿಯ ಅವಧಿಯ ಸಂತೋಷದ ಕ್ಷಣಗಳಲ್ಲಿ ಇದೂ ಒಂದಾಗಿದೆ.
-ಉಮೇಶ್ ಶೆಟ್ಟಿ  ಪಟ್ಟೆ, ಅಧ್ಯಕ್ಷರು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ.

ಸಂಘವು 7 ಕಂದಾಯ ಗ್ರಾಮಗಳನ್ನು ಹೊಂದಿದೆ. 2 ಪೂರ್ಣ ಪ್ರಮಾಣದ ಶಾಖೆ  ಮತ್ತು 1 ಪಡಿತರ ಶಾಖೆ  ಹೊಂದಿದೆ. ಪ್ರಧಾನ ಕಚೇರಿ ಮತ್ತು ಗೊಳಿತೊಟ್ಟು ಶಾಖೆ ಸ್ವಂತ ಕಟ್ಟಡದಲ್ಲಿದೆ.  ಇದೀಗ ಶಿರಾಡಿ ಶಾಖೆಗೂ  ಸ್ವಂತ ಕಟ್ಟಡ ನಿರ್ಮಾಣಗೊಂಡಿದೆ.
-ದಯಾಕರ ಕೆ.ಎಂ., ಮುಖ್ಯ ಕಾರ್ಯನಿರ್ವಹಣಾಧಿಕಾರಿ.

Leave a Reply

error: Content is protected !!