ಕೊಕ್ಕಡ: ರಾಷ್ಟ್ರೀಕೃತ ಬ್ಯಾಂಕ್ ಕೊಕ್ಕಡ ಶಾಖೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬಡ ಮಹಿಳೆಯರ ಬ್ಯಾಂಕ್ ಖಾತೆಯಿಂದ ಒಂದಿಲ್ಲೊಂದು ರೀತಿಯಲ್ಲಿ ಹಣ ವರ್ಗಾವಣೆಗೊಳ್ಳುತ್ತಿರುವ ಪ್ರಕರಣ ನಡೆಯುತ್ತಿದ್ದರು ಜಾಣ ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳು.
ಅ.25ರಂದು ಮಧ್ಯಾಹ್ನ 12.45ಕ್ಕೆ ಬ್ಯಾಂಕ್ ಮ್ಯಾನೇಜರ್ ಎಂದು ಫೋನ್ ಕರೆಯ ಮೂಲಕ ನಂಬಿಸಿ. ವಾಟ್ಸಪ್ ಮುಖಾಂತರ ಮಹಿಳೆಯ ಪಾಸ್ ಬುಕ್ ನಕಲನ್ನು ಪಡೆದು ಮಹಿಳೆಯೊರ್ವರಿಗೆ ರೂ.6,500 ವಂಚಿಸಿದ ಪ್ರಕಾರ ನಡಿದಿದೆ.
ಕೊಕ್ಕಡ ಗ್ರಾಮದ ಹಾರ ನಿವಾಸಿ ಟಿ.ಜೆ.ರೀನಾ ಅವರ ಬ್ಯಾಂಕ್ ಖಾತೆಯಿಂದ ರೂ. 6,500 ಅನ್ನು ಅಪರಿಚಿತ ವ್ಯಕ್ತಿ ಎರಗಿಸಿದ್ದಾನೆ.
ಟಿ.ಜೆ.ರೀನಾ ಅವರು ಕೊಕ್ಕಡದ ರಾಷ್ಟ್ರೀಕೃತ ಬ್ಯಾಂಕು ಒಂದರಲ್ಲಿ ಖಾತೆ ಹೊಂದಿದ್ದು, ಇತ್ತೀಚೆಗೆ ಅವರು ಚಿನ್ನಾಭರಣವನ್ನು ಅಡಮಾನವಾಗಿ ಇಟ್ಟಿದ್ದು. ಇಂದು ಮಧ್ಯಾಹ್ನ ಅಪರಿಚಿತ ವ್ಯಕ್ತಿ ಟಿ.ಜೆ.ರೀನಾ ಅವರಿಗೆ ಕರೆ ಮಾಡಿ ಬ್ಯಾಂಕ್ ಮ್ಯಾನೇಜರ್ ಪರಿಚಯಿಸಿಕೊಂಡು ನಂಬಿಸಿ ನಿಮ್ಮ ಅಕೌಂಟ್ ಬ್ಲಾಕ್ ಆಗಿದೆ, ಇದರಿಂದ ನೀವು ಬ್ಯಾಂಕಿನಲ್ಲಿ ಇಟ್ಟಿರುವ ಚಿನ್ನಕ್ಕೆ ತೊಂದರೆಯಾಗುತ್ತದೆ ಎಂದು ತಿಳಿಸಿ ನಂತರ ವಾಟ್ಸಪ್ ಮುಖಾಂತರ ಬ್ಯಾಂಕಿನ ಪಾಸ್ ಪುಸ್ತಕದ ನಕಲನ್ನು ಪಡೆದುಕೊಂಡು ಅವರ ಖಾತೆಯಿಂದ ಹಣ ಡ್ರಾ ಆಗಿರುವುದು ಕಂಡು ಬಂದಿದೆ.
ಈ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಅದೆಷ್ಟೋ ಬಡ ಮಹಿಳೆಯರ ಹಣವು ಹಲವು ವಿಧಗಳಲ್ಲಿ ಮೋಸವಾಗುತ್ತಿದ್ದರು ಹಿರಿಯ ಅಧಿಕಾರಿಗಳು ಯಾರು ಈ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದು ಸಾರ್ವಜನಿಕರಲ್ಲಿ ಭಯದೊಂದಿಗೆ ಯಕ್ಷಪ್ರಶ್ನೆಯಾಗಿ ಉಳಿದಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.