ಗೌರವಾಧ್ಯಕ್ಷರಾಗಿ ಬಾಲಕೃಷ್ಣ ಬಾಣಜಾಲು, ಅಧ್ಯಕ್ಷರಾಗಿ ಇಸ್ಮಾಯಿಲ್ ನೆಲ್ಯಾಡಿ ಅಡ್ವೋಕೇಟ್, ಕಾರ್ಯದರ್ಶಿಯಾಗಿ ವಿಮಲ್ ಕುಮಾರ್ ಆಯ್ಕೆ
ನೆಲ್ಯಾಡಿ: ನೋಕಿಪಡಿ ಕ್ರಿಕೆಟರ್ಸ್ ಅಬುಧಾಬಿ ಮತ್ತು ನೆಲ್ಯಾಡಿ ಇದರ ಆಶ್ರಯದಲ್ಲಿ ನೆಲ್ಯಾಡಿ ಹಾಗು ಆಸುಪಾಸಿನ ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಹಾಗು ಶಾಲಾ ಶುಲ್ಕ ಭರಿಸುವ ಮಹತ್ತರವಾದ ಉದ್ದೇಶವನ್ನು ಇಟ್ಟುಕೊಂಡು 40ವರುಷ ಮೇಲ್ಪಟ್ಟವರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ “ನೆಲ್ಯಾಡಿ ಲೆಜೆಂಡ್ಸ್ ಪ್ರೀಮಿರ್ ಲೀಗ್ ಟ್ರೋಫಿ 2024” ಡಿಸೆಂಬರ್ 15ರಂದು ನೆಲ್ಯಾಡಿಯ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ನೋಕಿಪಡಿ ಕ್ರಿಕೆಟರ್ಸ್ ಅಬುಧಾಬಿ ಮತ್ತು ನೆಲ್ಯಾಡಿ ಇದರ ದುಬೈಯಲ್ಲಿ ಸಂಘಟನೆಯ ಸಂಚಾಲಕ ರಫೀಕ್ ಪ್ರಿಯದರ್ಶಿನಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಲೆಜೆಂಡ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಸಮಿತಿಯನ್ನು ರಚಿಸಲಾಯಿತು ಹಾಗೂ ಇತ್ತೀಚೆಗೆ ನೋಕಿಪಡಿ ಕ್ರಿಕೆಟರ್ಸ್ ವತಿಯಿಂದ ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ನೀಡಿತ್ತು, ಈ ಕಾರ್ಯಕ್ರಮಕ್ಕೆ ತನು ಮನ ಹಾಗೂ ಧನಗಳಿಂದ ಸಹಕರಿಸಿದ ಎಲ್ಲಾ ಧಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ನೋಕಿಪಡಿ ಕ್ರಿಕೆಟರ್ಸ್ ಇದರ ಗೌರವಾಧ್ಯಕ್ಷ ಯುಎಇ ಕಮಲ್ ನೆಲ್ಯಾಡಿ ಸಭೆಯನ್ನು ಉದ್ಘಾಟಿಸಿದರು. ಶಾಹುಲ್ ನೆಲ್ಯಾಡಿ, ಅಝರ್ ನೆಲ್ಯಾಡಿ, ಅಶ್ರಫ್ ನೆಲ್ಯಾಡಿ. ನವಾಜ್ ಸುಜಯ್, ಮನೋಜ್ ಅಡ್ಡಹೊಳೆ, ಸಿಜೋ ಆರ್ಲ, ಸಿದ್ದಿಕ್ ಕೋಲ್ಪೆ, ಮುಸ್ತಫಾ, ಅಜ್ಮಾನ್ ಸಮದ್ ಹಫೀಜ್ ಶರೀಫ್, ಖಲಂದರ್ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.
ಸಮಿತಿ:
ಗೌರವಾಧ್ಯಕ್ಷರಾಗಿ ಬಾಲಕೃಷ್ಣ ಬಾಣಜಾಲು, ಅಧ್ಯಕ್ಷರಾಗಿ ಇಸ್ಮಾಯಿಲ್ ನೆಲ್ಯಾಡಿ ಅಡ್ವೋಕೇಟ್, ಉಪಾಧ್ಯಕ್ಷರಾಗಿ ಶಾಜಿ ವರ್ಗಿಸ್, ಮುರಳಿ ನಾಯರ್ ಹೊಸಮಜಲು, ಶಿವಣ್ಣ.ಪಿ ಹೆಗ್ಡೆ, ಎಂ.ಕೆ.ಇಬ್ರಾಹಿಂ, ಪ್ರದಾನ ಕಾರ್ಯದರ್ಶಿಯಾಗಿ ವಿಮಲ್ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ಆನಂದ ಮಾದೇರಿ, ಕ್ರೀಡಾ ಕಾರ್ಯದರ್ಶಿಯಾಗಿ ಸತೀಶ್ ಮಕ್ಕಿಗದ್ದೆ, ಸದಸ್ಯರುಗಳಾಗಿ ಹಮೀದ್ ಪ್ರಿಯದರ್ಶಿನಿ, ಲೋಕೇಶ್ ಬಾಣಜಾಲು, ಸಲಾಂ ಪಡುಬೆಟ್ಟು, ಇಸಾಕ್ ಪೊಲೀಸ್, ಪ್ರಮೋದ್ ಕುಮಾರ್, ಆರೀಶ್ ಮಾಸ್ಟರ್, ಅಬ್ದುಲ್ ರಹಿಮಾನ್ ಸಿಟಿ, ಸಂಜಯ್ ದೊಂತಿಲ, ಶಿಬು ವರ್ಗಿಸ್, ರವಿಚಂದ್ರ ಸೌರಭ, ಸುರೇಶ್ ಪಡಿಪಂಡ, ಗಣೇಶ್ ಪೂಜಾರಿ, ಶಕೀರ್ ಹಕ್, ಸಮೀರ್ ಪಡುಬೆಟ್ಟು, ಸಂಘಟನ ಕಾರ್ಯದರ್ಶಿಯಾಗಿ ರಫೀಕ್ ಪ್ರಿಯದರ್ಶಿನಿ ಆಯ್ಕೆಯಾದರು.