ಕಡಬ ಕ್ನಾನಾಯ ಜ್ಯೋತಿ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

ಶೇರ್ ಮಾಡಿ

ಕಡಬ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇದರ ಆಶ್ರಯದಲ್ಲಿ ಕಡಬದ ಸರಸ್ವತಿ ಸಮೂಹ ಸಂಸ್ಥೆಯಲ್ಲಿ ಕಡಬ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆಯಿತು. ಇದರಲ್ಲಿ ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ತುಷನ್.ಪಿ.ಎನ್(ಕನ್ನಡ ಕಂಠಪಾಠ), ಮಹಮ್ಮದ್ ಅಸ್ಫಾನ್ (ಇಂಗ್ಲೀಷ್ ಕಂಠ ಪಾಠ), ಅಭಿರಾಮ್(ಧಾರ್ಮಿಕ ಪಠಣ ಸಂಸ್ಕೃತ),ಜನನಿ(ದೇಶಭಕ್ತಿ ಗೀತೆ) ಹಾಗೂ ಸಾಕ್ಷಾತ್.ಎಂ ಕ್ಲೇ ಮಾಡಲಿಂಗ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ತನ್ಮಯ್(ಹಿಂದಿ ಕಂಠಪಾಠ) ,ಶೈಭಾ ರುಕ್ಯ(ಧಾರ್ಮಿಕ ಪಠಣ ಅರೇಬಿಕ್),ಅಲ್ಫಿನ್ ಅಬ್ರಹಾಂ(ಮಿಮಿಕ್ರಿ), ಶಾನ್ ಐಸಾಕ್(ಕ್ಲೇ ಮಾಡಲಿಂಗ್), ಧಾತ್ರಿ(ಭಕ್ತಿಗೀತೆ),ಸ್ವಸ್ತಿಕರಾಮ(ಸಂಸ್ಕೃತ ಧಾರ್ಮಿಕ ಪಠಣ), ಹಾಗೂ ದ್ವಿತೀಯ ಸ್ಥಾನವನ್ನು ಸ್ನೇಹ.ಕೆ.ಸಿ(ಆಶುಭಾಷಣ), ಸಸ್ತಿಕರಾಮ(ಪ್ರಬಂಧ ರಚನೆ), ಲಕ್ಸಣ್ಯ.ಡಿ.ಎನ್(ಕಥೆ ಹೇಳುವುದು), ಧಾತ್ರಿ(ದೇಶಭಕ್ತಿ ಗೀತೆ) ಹಾಗೂ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರದ ರೆ.ಫಾದರ್ ಅನೀಶ್ ಫಿಲಿಪ್ ಹಾಗೂ ಮುಖ್ಯ ಗುರುಗಳಾದ ಮರಿಯ ಲೂಯಿಸ ಅವರ ಮಾರ್ಗದರ್ಶನದಲ್ಲಿ ಶಾಲಾ ಶಿಕ್ಷಕರು ತರಬೇತಿ ನೀಡಿದ್ದಾರೆ.

Leave a Reply

error: Content is protected !!