ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ‘ಮನೆ ಮದ್ದುಗಳು’ ಉಪನ್ಯಾಸ.

ಶೇರ್ ಮಾಡಿ

ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮನೆ ಮದ್ದುಗಳ ಕುರಿತಾದ ಉಪನ್ಯಾಸವು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೆಂಗಳೂರಿನ ಖ್ಯಾತ ವೈದ್ಯ, ಸಂಶೋಧಕ ಡಾ. ಅವಿನಾಶ್ ಸಾಲ್ಗಾರ್ ಮಾತನಾಡುತ್ತಾ “ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ”. ನಮ್ಮ ಜೀವನ ಪದ್ಧತಿಯನ್ನು ಸ್ವಲ್ಪ ಬದಲಾವಣೆ ಮಾಡಿದರೆ, ಅನೇಕ ರೋಗಗಳನ್ನು ತಡೆಗಟ್ಟಬಹುದು. ಮನೆಯಲ್ಲಿಯೇ ಇರುವ ಅನೇಕ ವಸ್ತುಗಳೇ ನಮಗೆ ಔಷಧವಾಗಿ ಸಹಕಾರಿಯಾಗುತ್ತವೆ. ನಮ್ಮ ಹಿರಿಯರು ಮನೆಯಲ್ಲಿರುವ ವಸ್ತುಗಳು, ದೇಸಿ ಗೋವಿನ ಹಾಲು ಇತ್ಯಾದಿಗಳನ್ನೇ ಔಷಧವಾಗಿ ಬಳಸುತ್ತಿದ್ದರು. ವಿದ್ಯಾರ್ಥಿಗಳು ಎಲ್ಲರೂ ದೈಹಿಕವಾಗಿ, ಮಾನಸಿಕವಾಗಿ ಸಧೃಢರಾಗಿದ್ದು, ಆರೋಗ್ಯವಂತ ಸಮಾಜವನ್ನು ಕಟ್ಟಲು ಸಹಕರಿಸಿ. ಎಂದು ಹೇಳಿದರು. ಬಳಿಕ ಪ್ರಶ್ನೋತ್ತರ ಅವಧಿಯನ್ನು ನೆರವೇರಿಸಿದರು.

ವೇದಿಕೆಯಲ್ಲಿ ಗೋಸೇವಾ ಪ್ರಮುಖ್ ಗಂಗಾಧರ್, ನಿವೃತ್ತ ಬಿ.ಎಸ್ ಎನ್.ಎಲ್ ಉದ್ಯೋಗಿ ದಿವಾಕರ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ್ ಕೆ ಯವರು ಉಪನ್ಯಾಸ ಮಾಡಿದ ಡಾ. ಅವಿನಾಶ್ ಅವರನ್ನು ಶಾಲು ಹಾಕಿ ಸನ್ಮಾನಿಸಿದರು. ಉಪನ್ಯಾಸಕ ಚೇತನ್ ಎಂ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು. ಹಿರಿಯ ಉಪನ್ಯಾಸಕಿ ಶ್ರೀಮತಿ ಜಯಶ್ರೀ ಉಪನ್ಯಾಸಕರ ಪರಿಚಯ ಮಾಡಿದರು. ವಿದ್ಯಾರ್ಥಿನಿಯರಾದ ಹಂಸಿನಿ ಮತ್ತು ಬಳಗದವರು ಪ್ರಾರ್ಥಿಸಿದರು.

Leave a Reply

error: Content is protected !!