ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯಿತಿಯ ಹಸಿಮೀನು ಮಾರಾಟದ ಹಕ್ಕು ಹಾಗೂ ವಾರದ ಸಂತೆಯಲ್ಲಿ ಶುಲ್ಕ ವಸೂಲಿ ಹಕ್ಕು ಏಲಂ ಪ್ರಕ್ರಿಯೆ ನ.21ರಂದು ಗ್ರಾ.ಪಂ.ಅಧ್ಯಕ್ಷ ಯಾಕುಬ್ ಯಾನೆ ಸಲಾಂ ಬಿಲಾಲ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು.
ಮುಂದಿನ 1 ವರ್ಷದ ಅವಧಿಗೆ ನೆಲ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಸಿಮೀನು ವ್ಯಾಪಾರ ಮಾಡಲು ನಿಗದಿಗೊಳಿಸಿದ್ದ ನೆಲ್ಯಾಡಿ ಸಂತೆಕಟ್ಟೆ ಬಳಿಯ ಸ್ಟಾಲ್-1 ರೂ.89 ಸಾವಿರಕ್ಕೆ ಅಬ್ದುಲ್ ರಝಾಕ್ ಅವರಿಗೆ, ನೆಲ್ಯಾಡಿ ಸಂತೆಕಟ್ಟೆ ಬಳಿಯ ಸ್ಟಾಲ್-2 ರೂ. 85 ಸಾವಿರಕ್ಕೆ ವಿ.ಜೆ.ಮ್ಯಾಥ್ಯು ಅವರಿಗೆ ಹಾಗೂ ನೆಲ್ಯಾಡಿ ಸಂತೆಕಟ್ಟೆ ಬಳಿಯ ಸ್ಟಾಲ್-3 ರೂ.85 ಸಾವಿರಕ್ಕೆ ಅಬ್ದುಲ್ ರಝಾಕ್ ಅವರಿಗೆ ಖಾಯಂ ಆಗಿದೆ. ಮೂರು ಸ್ಟಾಲ್‌ಗಳ ಮಾರಾಟದ ಹಕ್ಕು ಒಟ್ಟು 2.59 ಲಕ್ಷ ರೂ.ಗೆ ಏಲಂ ಆಗಿದೆ. ಅಬ್ದುಲ್ ರಝಾಕ್, ವಿ.ಜೆ.ಮ್ಯಾಥ್ಯು, ಉಬೈದ್, ಗಣೇಶ್‌ಪೂಜಾರಿ, ಲತೀಫ್, ಅಶ್ರಫ್, ಎನ್.ಇಲ್ಯಾಸ್, ಶುಕೂರ್ ಅವರು ಹಸಿಮೀನು ಮಾರಾಟ ಬಿಡ್ಡುದಾರರಾಗಿ ಏಲಂನಲ್ಲಿ ಭಾಗವಹಿಸಿದ್ದರು.
ಸಂತೆಯಲ್ಲಿ ಶುಲ್ಕ ವಸೂಲಿ ಹಕ್ಕು ರೂ.1.30 ಲಕ್ಷಕ್ಕೆ ಖಾಯಂ:
ಮುಂದಿನ 1 ವರ್ಷದ ಅವಧಿಗೆ ನೆಲ್ಯಾಡಿ ವಾರದ ಸಂತೆಯಲ್ಲಿ ಶುಲ್ಕ ವಸೂಲಿ ಮಾಡುವ ಹಕ್ಕು ರೂ.1.30 ಲಕ್ಷಕ್ಕೆ ಮುಫೀಜ್ ಎಂಬವರಿಗೆ ಖಾಯಂಗೊಂಡಿದೆ. ವಿ.ಜೆ.ಮ್ಯಾಥ್ಯು, ಗಣೇಶ ಪೂಜಾರಿ, ಲತೀಫ್, ಎನ್.ಇಲ್ಯಾಸ್ ಬಿಡ್ಡುದಾರರಾಗಿ ಭಾಗವಹಿಸಿದ್ದರು.
ಗ್ರಾ.ಪಂ.ಉಪಾಧ್ಯಕ್ಷೆ ರೇಷ್ಮಾಶಶಿ, ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಅಬ್ದುಲ್ ಜಬ್ಬಾರ್, ಮಹಮ್ಮದ್ ಇಕ್ಬಾಲ್, ಉಷಾ ಜೋಯಿ, ಜಯಾನಂದ ಪಿ., ಆನಂದ ಪಿಲವೂರು ಉಪಸ್ಥಿತರಿದ್ದರು. ಪಿಡಿಒ ಮೋಹನ್‌ಕುಮಾರ್ ಜಿ., ಲೆಕ್ಕಸಹಾಯಕ ಅಂಗು ಅವರು ಏಲಂ ಶರ್ತಗಳನ್ನು ತಿಳಿಸಿ ಏಲಂ ಪ್ರಕ್ರಿಯೆ ನಡೆಸಿಕೊಟ್ಟರು. ಶಿವಪ್ರಸಾದ್, ಸೋಮನಾಥ ಹಾಗೂ ಇತರೇ ಸಿಬ್ಬಂದಿಗಳು ಸಹಕರಿಸಿದರು.