ಬೀದಿಗೆ ಬಿದ್ದ ಆರ್ ಎಸ್ ಎಸ್ ಕಟ್ಟಾಳು, ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

ಶೇರ್ ಮಾಡಿ

ಸಂಘ ಪರಿವಾರದಲ್ಲಿ ಜೀವ ತೇಯ್ದು, ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಭೀಷ್ಮ ಎಂದೇ ಖ್ಯಾತಿ ಪಡೆದಿರುವ 92 ವರ್ಷದ ವಿಟ್ಠಲ ಆಚಾರ್ಯ ಅವರು, ಮಕ್ಕಳು ಮಾಡಿದ ಮೋಸ ದಿಂದ ಬೀದಿಯಲ್ಲಿ ವಾಸ ಮಾಡುವಂತಾಗಿದೆ.

ಆರ್ ಎಸ್ ಎಸ್ ಕಟ್ಟಾಳು, ತುರ್ತು ಪರಿಸ್ಥಿತಿಯಲ್ಲಿ ಜೈಲು ವಾಸವನ್ನು ಅನುಭವಿದ್ದಾರೆ. 7ನೇ ವಯಸ್ಸಿಗೆ ಆರ್ ಎಸ್ ಎಸ್ ಸೇರಿ 107 ಪ್ರಕೃತಿ ಯಜ್ಞ ಮಾಡಲು ಆರ್ಥಿಕ ಮುಗ್ಗಟ್ಟು ಎದುರಾದಾಗ ಸೈಟ್ ಮಾರೋದಕ್ಕೂ ಸಿದ್ದವಾಗಿದ್ದರು. ಕುಟುಂಬದ ಆಂತರಿಕ ಕೆಲವು ಘಟನೆಗಳಿಂದ ಇಂದು ಬೀದಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ವಿಠಲ್ ಆಚಾರ್ಯ ಅವರು ಉಡುಪಿ ಜಿಲ್ಲೆಯವರು, ಚಿಕ್ಕಮಗಳೂರು ಜಿಲ್ಲೆ ಅವರ ಕರ್ಮ ಭೂಮಿ. ಅನೇಕ ದಶಕಗಳಿಂದ ಜಿಲ್ಲೆಯಲ್ಲಿ ವಾಸವಿರುವ ಅವರು ಆರ್ ಎಸ್ ಎಸ್ ಕಟ್ಟಾಳು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಯಡಿಯೂರಪ್ಪ, ಪಿಜಿಆರ್ ಸಿಂಧ್ಯಾ, ಶಂಕರಮೂರ್ತಿ, ಕಲ್ಲಡ್ಕ ಪ್ರಭಾಕರ ಭಟ್ ಜತೆ ಬೆಳಗಾವಿ, ಬಳ್ಳಾರಿ ಜೈಲು ಸೇರಿದ್ದರು.

ದತ್ತಪೀಠ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರೂ. ಇವರಿಗೆ ನಾಲ್ಕು ಜನ ಗಂಡು ಮಕ್ಕಳು, ಒಂದು ಹೆಣ್ಣುಮಗು ಎಲ್ಲಾರೂ ಡಾಕ್ಟರ್, ಇಂಜಿನಿಯರ್ ಉನ್ನತ ಹುದ್ದೆ ಯಲ್ಲಿದ್ದು ಕೌಟುಂಬಿಕ ಕಲಹದಿಂದ ಸಂಧ್ಯಾಕಾಲದಲ್ಲಿ ಬೀದಿಯಲ್ಲಿ ಬದುಕು ಕಳೆಯುವಂತಾಗಿದೆ. ಮಕ್ಕಳೇ ಮೋಸ ಮಾಡಿದ್ದಾರೆ. ಅವರ ಅನ್ನ ನನಗೆ ಬೇಡವೆಂದು ಮನೆ ಮುಂದೇ ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

Leave a Reply

error: Content is protected !!