ಪ್ರಣಮ್ಯ ನೆಲ್ಯಾಡಿ ಅವರ “ಪುಟ್ಟ ಹೆಜ್ಜೆ” ಕವನ ಸಂಕಲಕ್ಕೆ ಧರ್ಮಸ್ಥಳ ಖಾವಂದರ ಮೆಚ್ಚುಗೆ

ಶೇರ್ ಮಾಡಿ

ನೆಲ್ಯಾಡಿ: ಉಜಿರೆ ಎಸ್ ಡಿ ಎಂ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಣಮ್ಯ ಅವರು ರಚಿಸಿದ ಚೊಚ್ಚಲ ಕವನ ಸಂಕಲ “ಪುಟ್ಟಹೆಜ್ಜೆ” ಡಿ.11 ರಂದು ಬಿಡುಗಡೆಗೊಳ್ಳಲಿದೆ.

ಪ್ರಕಟಣೆಗೊಂಡ ಪ್ರಣಮ್ಯ ಅವರ “ಪುಟ್ಟ ಹೆಜ್ಜೆ” ಕವನ ಸಂಕಲಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಆಶೀರ್ವದಿಸಿದರು.

ಕವನ ಸಂಕಲನಕ್ಕೆ ಉಜಿರೆ ಎಸ್ ಡಿ ಎಂ ಸ್ವಾಯತ್ವ ಮಹಾವಿದ್ಯಾಲಯದ ಕನ್ನಡ ಸಹಾಯಕ ಅಧ್ಯಾಪಕರಾದ ದಿವಾ ಕೊಕ್ಕಡ ಅವರು ಮುನ್ನುಡಿ ಬರೆದಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈಕೆ ಕಡಬ ತಾಲೂಕಿನ ಕೊಣಾಲು ಗ್ರಾಮದ ಚಾಮೆತ್ತಮೂಲೆ ತರವಾಡು ಮನೆಯ ಗಣೇಶ್ ನಾಯ್ಕ ಹಾಗೂ ವಿದ್ಯಾಲತಾ ಅವರ ಪುತ್ರಿ.

Leave a Reply

error: Content is protected !!