ಶೌರ್ಯ ವಿಪತ್ತು ತಂಡದಿಂದ ಪರಪ್ಪು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಶ್ರಮದಾನ

ಶೇರ್ ಮಾಡಿ

ಕೊಕ್ಕಡ:ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ತಂಡದಿಂದ ಪರಪ್ಪು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಶ್ರಮದಾನ ಡಿ.18ರಂದು ನಡೆಯಿತು.

ಜನವರಿ ತಿಂಗಳಿನಲ್ಲಿ ನಡೆಯುವ ಅರ್ಧ ಏಕಾಹ ಭಜನೆ ಪ್ರಯುಕ್ತ ಸ್ವಚ್ಛತೆಯನ್ನು ನಡೆಸಿ ದೇವಸ್ಥಾನದ ಬದಿಯಲ್ಲಿ ಕಳೆದ ಮಳೆಗಾಲದಲ್ಲಿ ಕುಸಿದ ಮಣ್ಣನ್ನು ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸೀಮುಳ್ಳು ದಿನೇಶ್ ಗೌಡ ಉಪಸ್ಥಿತರಿದ್ದು ಸಹಕಾರ ನೀಡಿದರು. ಶೌರ್ಯ ವಿಪತ್ತು ತಂಡದ ಸದಸ್ಯರಾದ ಶೀನಪ್ಪ ನಾಯ್ಕ್ ಮುಚ್ಚಿರಡ್ಕ, ಕುಶಾಲಪ್ಪ ಗೌಡ, ರಾಧಾಕೃಷ್ಣ ಗುತ್ತು, ಅವಿನಾಶ್ ಭಿಡೆ, ಸೋಮಶೇಖರ್, ಬೇಬಿ ಪೂಜಾರಿ, ರಶ್ಮಿತಾ, ರಮೇಶ ಬೈರಕಟ್ಟ, ಹರೀಶ್ ವಳಗುಡ್ಡೆ ಭಾಗವಹಿಸಿದ್ದರು.

  •  

Leave a Reply

error: Content is protected !!