ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ನೆಲ್ಯಾಡಿ ಹಾಗೂ ಕೌಕ್ರಾಡಿ ಪೇಟೆಯಲ್ಲಿ ಉಂಟಾಗಿರುವ ಸಮಸ್ಯೆ ಪರಿಹಾರಕ್ಕೆ ಮನವಿಗೆ ನಿರ್ಣಯ
ನೇಸರ ಮಾ.02: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ನೆಲ್ಯಾಡಿ ಹಾಗೂ ಕೌಕ್ರಾಡಿ ಪೇಟೆಯಲ್ಲಿ ಉಂಟಾಗಿರುವ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಗ್ರಾ.ಪಂ.,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರ ಕಂಪನಿಗೆ ಮನವಿ ಮಾಡಲು ಮಾ.2ರಂದು ನೆಲ್ಯಾಡಿ ಬಿ.ಹೆಚ್.ಟವರ್‌ನಲ್ಲಿ ನಡೆದ ನೆಲ್ಯಾಡಿ ಕಟ್ಟಡ ಮಾಲಕರ ಸಂಘದ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಭೆ ಕಟ್ಟಡ ಮಾಲಕರ ಸಂಘದ ಅಧ್ಯಕ್ಷ ಮಹಮ್ಮದ್ ಹನೀಫ್ ಸಿಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದರಿಂದ ನೆಲ್ಯಾಡಿ ಹಾಗೂ ಕೌಕ್ರಾಡಿ ಪೇಟೆಯಲ್ಲಿ ಹಲವಾರು ಸಮಸ್ಯೆಗಳು ಉದ್ಭವಿಸಿವೆ.ಕಾಮಗಾರಿ ಕುರಿತಂತೆ ಕಟ್ಟಡ ಮಾಲಕರಿಗೆ ಹಾಗೂ ವರ್ತಕರಿಗೆ ಸರಿಯಾದ ಮಾಹಿತಿಯೂ ಸಿಗುತ್ತಿಲ್ಲ.ಈ ಹಿನ್ನೆಲೆಯಲ್ಲಿ ನೆಲ್ಯಾಡಿ ಹಾಗೂ ಕೌಕ್ರಾಡಿ ಗ್ರಾಮ ಪಂಚಾಯತ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಕೆಎನ್‌ಆರ್ ಕಂಪನಿಯವರಿಗೆ ಮನವಿ ಮಾಡಿ ಕಟ್ಟಡ ಮಾಲಕರಿಗೆ ಹಾಗೂ ವರ್ತಕರಿಗೆ ರಸ್ತೆ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆ ಪರಿಹರಿಸುವಂತೆ ಕೋರಿ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು ಹಾಗೂ ಹೆದ್ದಾರಿ ಕಾಮಗಾರಿಯಿಂದಾಗಿ ಪೇಟೆಯಲ್ಲಿ ತಲೆದೋರಿರುವ ದೂಳಿನ ಸಮಸ್ಯೆ, ನೀರು ಸರಬರಾಜು ಸಮಸ್ಯೆಗೆ ಪರಿಹಾರ, ಮಳೆಗಾಲದಲ್ಲಿ ಮಳೆ ನೀರು ಮುಖ್ಯಚರಂಡಿಗೆ ಬಿಡುವ ಬಗ್ಗೆ, ಅಂಡರ್‌ಪಾಸ್, ಸರ್ವೀಸ್ ರೋಡ್ ಬಗ್ಗೆ ಸರಿಯಾದ ಮಾಹಿತಿ ಹಾಗೂ ಪೇಟೆಯಲ್ಲಿ ಕಾಮಗಾರಿಯನ್ನು ವೇಗಗೊಳಿಸುವಂತೆ ಕೋರಲು ಸಭೆಯಲ್ಲಿ ನಿರ್ಧರಿಸಲಾಯಿತು.
ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಕಟ್ಟಡ ಮಾಲಕರಾದ ಒ.ಜಿ.ನೈನಾನ್, ರವಿಚಂದ್ರ ಹೊಸವೊಕ್ಲು, ಮಹಮ್ಮದ್ ಪುತ್ತು, ಶಿವಣ್ಣ ಪಿ.ಹೆಗ್ಡೆ, ಹುಸೈನ್ ಮಾಣಿ, ಡಾ.ಪ್ರಸಾದ್, ರಾಮಣ್ಣ ಟೈಲರ್, ಗಣೇಶ್ ರಶ್ಮಿ, ದಯಾನಂದ ವಾಣಿಶ್ರೀ, ಟೋಮಿ, ನೌಫಾಲ್ ಸಾಗರ್, ಜೋಸೆಫ್ ಡಿಯೋನ್, ಮುತಾಲಿಬ್ ಎಂ.ಆರ್. ಸಿದ್ಧೀಕ್ ಜಮಾಲಿಯಾ, ಮಿಥುನ್ ಜಿ.ಎಸ್.ಶಿವಕೃಪಾ, ನಾಸೀರ್ ಅಲಂಪಾಡಿ, ಡಾ.ಸದಾನಂದ ಕುಂದರ್, ಸುಲೈಮಾನ್ ಎನ್.ಎಸ್, ಮೋಹನ್ ಕುಮಾರ್.ಡಿ, ಅಶ್ರಫ್ ಮತ್ತಿತರರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಸಮಿತಿ ಪುನರ್‌ರಚನೆ:
ಸಭೆಯಲ್ಲಿ ಕಟ್ಟಡ ಮಾಲಕರ ಸಮಿತಿ ಪುನರ್ ರಚನೆ ಮಾಡಲಾಯಿತು. 2022-23ನೇ ಸಾಲಿಗೆ ಅಧ್ಯಕ್ಷರಾಗಿ ಒ.ಜಿ.ನೈನಾನ್, ಪ್ರಧಾನ ಕಾರ್ಯದರ್ಶಿಯಾಗಿ ರವಿಚಂದ್ರ ಹೊಸವೊಕ್ಲುರವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷರಾಗಿ ಅಲಿಸಾ ಕಾಂಪ್ಲೆಕ್ಸ್ ಮಾಲಕ ಮಹಮ್ಮದ್ ಪುತ್ತು, ಶಿಲ್ಪಾ ಕಾಂಪ್ಲೆಕ್ಸ್‌ನ ಪಿ.ಶಿವಣ್ಣ ಹೆಗ್ಡೆ, ಕಾರ್ಯದರ್ಶಿಯಾಗಿ ಹುಸೈನ್ ಮಾಣಿ, ಖಜಾಂಜಿಯಾಗಿ ಮಹಮ್ಮದ್ ಹನೀಫ್ ಸಿಟಿಯವರನ್ನು ಆಯ್ಕೆ ಮಾಡಲಾಯಿತು.
—ಜಾಹೀರಾತು—