ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

ಶೇರ್ ಮಾಡಿ

ಉತ್ತರ ಪ್ರದೇಶದ ಹತ್ರಾಸ್‌ನ ಖಾಸಗಿ ಶಾಲೆಯೊಂದರಲ್ಲಿ ಕೆಲ ತಿಂಗಳ ಹಿಂದೆ 2ನೇ ತರಗತಿ ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆಯಾಗಿತ್ತು. ಶಾಲೆಯ ಯಶಸ್ಸಿಗಾಗಿ ಮಾಟ-ಮಂತ್ರ ಮಾಡಿ, ಶಾಲೆಯ ಮ್ಯಾನೇಜರ್‌ ಮಗುವನ್ನು ಬಲಿ ನೀಡಿದ್ದಾನೆ ಎಂದೂ ಹೇಳಲಾಗಿತ್ತು. ಆದರೆ, ಈ ಪ್ರಕರಣಕ್ಕೀಗ ಹೊಸ ಟ್ವಿಸ್ಟ್‌ ಸಿಕ್ಕಿದೆ.

ವಿದ್ಯಾರ್ಥಿಯನ್ನು ಬಲಿ ನೀಡಲಾಗಿಲ್ಲ. ಬದಲಿಗೆ ಅದೇ ಶಾಲೆಯ ವಿದ್ಯಾರ್ಥಿಯೊಬ್ಬ ರಜೆಗಾಗಿ ಮಗುವನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ ಶೀಟ್‌ನಲ್ಲಿ ಈ ವಿಷಯ ಉಲ್ಲೇಖೀಸಿ, ಶಾಲೆಯ ವಿದ್ಯಾರ್ಥಿ ಸತ್ತರೆ ಶಾಲೆಗಳು ರಜೆ ಘೋಷಿಸುತ್ತವೆ ಎಂಬುದಕ್ಕಾಗಿ 8ನೇ ತರಗತಿ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  •  

Leave a Reply

error: Content is protected !!