ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಶ್ಯಾಮ್ ಪ್ರಸಾದ್ ಬಸವ ಇನ್ನಿಲ್ಲ

ಶೇರ್ ಮಾಡಿ

ಕೊಕ್ಕಡ: ಶ್ರೀ ಧನ್ವಂತರಿ ಕ್ಷೇತ್ರ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಕೊಕ್ಕಡ ಇಲ್ಲಿ ಜಾತ್ರಾ ಸಂದರ್ಭಗಳಲ್ಲಿ ಕಳೆದ ಸುಮಾರು 15 ವರ್ಷಗಳಿಂದ ಭಾಗವಹಿಸಿ ಶ್ರೀ ದೇವರಿಗೆ ಸೇವೆಯನ್ನು ನೀಡುತ್ತಿದ್ದ ಸಾಧು ಸ್ವಭಾವದ ಶ್ಯಾಮ್ ಪ್ರಸಾದ್ ಹೆಸರಿನ ಬಸವ(ನಂದಿ) ಡಿ.29 ರಂದು ಅಲ್ಪಕಾಲಿಕ ಅನಾರೋಗ್ಯದಿಂದ ಹಲ್ಲಿಂಗೇರಿ ಗೋಶಾಲೆಯಲ್ಲಿ ನಿಧನ ಹೊಂದಿದೆ.

ಬಸವ ನನ್ನು ಆರಂಭದಲ್ಲಿ ಪುರುಷೋತ್ತಮ ಟೈಲರ್ ಮಡ್ಯಾಲಗುಂಡಿ ಎಂಬವರು ಆರೈಕೆಯನ್ನು ಮಾಡುತ್ತಿದ್ದರು, ಕಳೆದ 7 ವರ್ಷಗಳಿಂದ ಹಳ್ಳಿಗೇರಿ ಎಂಬಲ್ಲಿ ಇರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾಮಧೇನು ಗೋಶಾಲೆಯಲ್ಲಿ ಆರೈಕೆಯನ್ನು ಮಾಡುತ್ತಿದ್ದರು.

  •  

Leave a Reply

error: Content is protected !!