ಬೀದಿ ನಾಯಿ ದಾಳಿಗೆ ಹೆದರಿ ಓಡಿದ ಬಾಲಕ ಆವರಣವಿಲ್ಲದ ಪಾಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಣ್ಣೂರು ತೂವ್ವಕುನ್ನ್ ನಲ್ಲಿ ನಡೆದಿದೆ.
ಚೇಲಕ್ಕೋಡ್ ಜುಮ್ಮಾ ಮಸೀಸಿ ಬಳಿಯ ಉಸ್ಮಾನ್ ಎಂಬವರ ಪುತ್ರ, ತೂವ್ವಕುನ್ನ್ ಸರಕಾರಿ ಶಾಲೆಯ ನಾಲ್ಕನೆ ತರಗತಿ ವಿದ್ಯಾರ್ಥಿ ಮೊಹಮ್ಮದ್ ಫಸಲ್ (9) ಮೃತಪಟ್ಟಿದ್ದಾನೆ. ಸಂಜೆ 5.30ಕ್ಕೆ ಮೊಹಮ್ಮದ್ ಫಸಲ್ ಮನೆ ಸಮೀಪ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಬೀದಿ ನಾಯಿ ಅವರತ್ತ ಓಡಿ ಬಂದಿದೆ. ಮಕ್ಕಳು ಹೆದರಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಬಳಿಕ ಫಸಲ್ ನಾಪತ್ತೆಯಾಗಿದ್ದ. ಮೊಹಮ್ಮದ್ ಫಸಲ್ ಸಮೀಪದ ಸ್ನೇಹಿತರ ಮನೆಯಲ್ಲಿ ಇರಬಹುದು ಎಂದು ಪೋಷಕರು ಭಾವಿಸಿದ್ದರು. ಪುತ್ರ ಮನೆಗೆ ತಲುಪದಿದ್ದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಡಿದಾಗ ರಾತ್ರಿ 7.45ಕ್ಕೆ ಸಮೀಪದ ಪಾಳುಬಾವಿಯಲ್ಲಿ ಮೃತದೇಹ ಕಾಣಿಸಿದೆ.
ಪೊಲೀಸರು, ಅಗ್ನಿಶಾಮಕ ರಕ್ಷಣಾ ದಳ ಸ್ಥಳಕ್ಕೆ ತಲುಪಿ ಮೃತದೇಹವನ್ನು ಬಾವಿಯಿಂದ ಹೊರತೆಗೆದಿದ್ದಾರೆ.