ನೆಲ್ಯಾಡಿ ಗ್ರಾಮ ಪಂಚಾಯಿತಿನ ಶೇ.5ರ ಅನುದಾನದಲ್ಲಿ ಅಂಗವಿಕಲರಿಗೆ ವೈದ್ಯಕೀಯ ನೆರವಿಗಾಗಿ ಚೆಕ್ ಅನ್ನು ಜ.09ರಂದು ವಿತರಿಸಲಾಯಿತು.
ನೆಲ್ಯಾಡಿ ಗ್ರಾಮ ಪಂಚಾಯಿತಿನ ಎರಡನೇ ವಾರ್ಡಿನಲ್ಲಿರುವ 7ಮಂದಿ ಅಂಗವಿಕಲರಿಗೆ ಚೆಕ್ ಅನ್ನು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಸಲಾಂ ಬಿಲಾಲ್ ಹಾಗೂ ಉಪಾಧ್ಯಕ್ಷರಾದ ರೇಷ್ಮಾ ಶಶಿ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿನ ಕಾರ್ಯದರ್ಶಿಯಾದ ಅಂಗು ಹಾಗೂ ಸಿಬ್ಬಂದಿ ವರ್ಗದವರು, ಫಲಾನುಭವಿಗಳು ಉಪಸ್ಥಿತರಿದ್ದರು.