ಕಾಲೇಜೊಂದರ ವಿದ್ಯಾರ್ಥಿನಿ ಸ್ವಗೃಹದಲ್ಲಿ ಆತ್ಮಹತ್ಯೆ

ಶೇರ್ ಮಾಡಿ

ಪುತ್ತೂರು ನಗರದ ಕಾಲೇಜೊಂದರ ವಿದ್ಯಾರ್ಥಿನಿ, ಸ್ವಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನರಿಮೊಗ್ರು ಗ್ರಾಮದ ಕೂಡುರಸ್ತೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.

ನರಿಮೊಗರು ಗ್ರಾಮದ ಕೂಡರಸ್ತೆ ನಿವಾಸಿ ಕೇಶವ ಜೋಗಿ ಮತ್ತು ಪುಷ್ಪಾ ದಂಪತಿ ಪುತ್ರಿ, ಪುತ್ತೂರಿನ ಸೇಂಟ್‌ ಫೀಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಿತಾ (17) ಆತ್ಮಹತ್ಯೆ ಮಾಡಿಕೊಂಡವರು.

ಮನೆಯಲ್ಲಿ ಕೋಣೆಗೆ ಹೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಕ್ಷಿತಾ ಅವರಿಗೆ ತಂದೆ, ತಾಯಿ, ಸಹೋದರ ಇದ್ದಾರೆ.

  •  

Leave a Reply

error: Content is protected !!