ಕೂತೂಹಲವೇ ಕಲಿಕೆಯ ಮೊದಲ ಹೆಜ್ಜೆ – ಡಾ.ಅರುಣ್ ಉಳ್ಳಾಲ್

ಶೇರ್ ಮಾಡಿ

ನೆಲ್ಯಾಡಿ – ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 47ನೇ ವರುಷದ ಮಕರ ಜ್ಯೋತಿ ಉತ್ಸವ ಹಾಗೂ ಭಜನಾ ಮಹೋತ್ಸವದ ಸಮಾರೋಪ ಸಮಾರಂಭ

ನೆಲ್ಯಾಡಿ: ಸಂಕ್ರಮಣವೆಂದರೆ ಬದಲಾವಣೆಯ ಒಂದು ಸಂಕೇತವಾಗಿದೆ, ತಿಂಗಳುಗಳಿಗೂ ಪ್ರಕೃತಿಗಳಿಗೆ ಅವಿನಾಭಾವ ಸಂಬಂಧವಿದೆ. ಹಿಂದೂ ಧರ್ಮದಲ್ಲಿ ಇರುವಷ್ಟು ಸಂಭ್ರಮ, ಸಡಗರ, ಆಚರಣೆ ವಿಶ್ವದ ಯಾವ ಮತಗಳಲ್ಲಿ ಕಾಣಲು ಸಾಧ್ಯವಿಲ್ಲ. ಪ್ರತಿಯೊಂದು ಉತ್ಸವಗಳು ಜನಮಾನಸಕ್ಕೆ ತಲುಪುವಂತೆ ಸದಾ ಜೀವಂತಿಕೆ ಇರಬೇಕು. ಯುವಕರಲ್ಲಿ ಯಾವಾಗ ಕುತೂಹಲ ಆರಂಭವಾಗುತ್ತವೆ ಆಗ ಕುತೂಹಲವೇ ಕಲಿಕೆಯ ಮೊದಲ ಹೆಜ್ಜೆಯಾಗುತ್ತದೆ ಎಂದು ಸಂಸ್ಕೃತಿ ಚಿಂತಕರು ಡಾ.ಅರುಣ್ ಉಳ್ಳಾಲ್ ಹೇಳಿದರು.

ನೆಲ್ಯಾಡಿ – ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 47ನೇ ವರುಷದ ಮಕರ ಜ್ಯೋತಿ ಉತ್ಸವ ಹಾಗೂ ಭಜನಾ ಮಹೋತ್ಸವದ ಸಮಾರೋಪ ಸಮಾರಂಭದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

 

 

ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಹರಿ ಹರ ಇಬ್ಬರು ಸೇರಿ ಸೃಷ್ಟಿಯಾದ ಅಯ್ಯಪ್ಪಸ್ವಾಮಿಯನ್ನು ಎಲ್ಲರು ಜಾತಿ ಭೇದವಿಲ್ಲದೆ ಆರಾಧಿಸುತ್ತಾರೆ. ವಿವಿಧತೆಯಲ್ಲಿ ಏಕತೆ ಎಂಬಂತೆ ಎಲ್ಲರಿಗೂ ಒಂದೇ ರೀತಿಯಲ್ಲಿ ಸ್ವಾಮಿ ದರ್ಶನವನ್ನು ನೀಡುತ್ತಾನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ – ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಡಾ.ಸದಾನಂದ ಕುಂದರ್ ಅವರು ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ರವಿಚಂದ್ರ ಹೊಸವಕ್ಲು, ಪ್ರಧಾನ ಕಾರ್ಯದರ್ಶಿ ಸುಧೀರ್.ಕೆ.ಎಸ್, ಕೋಶಾಧಿಕಾರಿ ವಿನೋದ್ ಕುಮಾರ್ ಬಾಕಿಜಾಲು, ಜೊತೆ ಕಾರ್ಯದರ್ಶಿ ಮೋಹನ್ ಕಟ್ಟೆಮಜಲು, ಭಜನಾ ಸಮಿತಿ ಅಧ್ಯಕ್ಷರಾದ ಜನಾರ್ದನ ಹೆಗ್ಡೆ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಸುಧೀರ್.ಕೆ.ಎಸ್, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಧಾರ್ಮಿಕ ಕಾರ್ಯಕ್ರಮಗಳು:
ಪ್ರಧಾನ ಅರ್ಚಕರಾದ ಶ್ರೀಧರ ನೂಜಿನ್ನಾಯ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ ಮಹಾಗಣಪತಿ ಹೋಮ, ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಉಷಾ ಪೂಜೆ, ಮಕರ ಸಂಕ್ರಾಂತಿಯ ಧಾರ್ಮಿಕ ಕಾರ್ಯಕ್ರಮಗಳು, ಸೀಯಾಳಾಭಿಷೇಕ, ತುಪ್ಪಾಭಿಷೇಕ, ಅಶ್ವತ ಕಟ್ಟೆಯಲ್ಲಿ ಅಶ್ವತ ಪೂಜೆ, ಮಹಾ ರಂಗಪೂಜೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಮಕರ ಜ್ಯೋತಿಯ ವಿಶೇಷವಾಗಿ ನೀಲಾಂಜನ ದೀಪ ದರ್ಶನಂ ಮೆರವಣಿಗೆ ದೇವಸ್ಥಾನದಿಂದ ನೆಲ್ಯಾಡಿ ಪೇಟೆಯವರಿಗೆ ನಡೆಯಿತು ಬಳಿಕ ದೀಪಾರಾಧನೆ, ಪುಷ್ಪಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆಗಳು ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ:
ವಿದುಷಿ ಶ್ರೀಮತಿ ಸುರೇಖಾ ಹರೀಶ್ ಅವರ ಶಿಷ್ಯ ವೃಂದ “ಉಕ್ಷಿಪ್ತ ನೃತ್ಯ ಕಲಾ ಶಾಲೆ” ನೆಲ್ಯಾಡಿ – ಮಂಗಳೂರು ಇವರಿಂದ “ನೃತ್ಯ ಸಿಂಚನ – ಭರತ ವೈಭವ” ಹಾಗೂ ಉದಯೋನ್ಮುಖ ಕಲಾವಿದ ಪುಷ್ಪರಾಜ ನೆಲ್ಯಾಡಿ ಮತ್ತು ಬಳಗದವರಿಂದ “ವಿಸ್ಮಯ ಮ್ಯಾಜಿಕ್ ಲೋಕ” ಜಾದು ಪ್ರದರ್ಶನ ನಡೆಯಿತು. ರಾತ್ರಿ 9:00 ರಿಂದ ಶ್ರೀ ಆದಿ ಧೂಮಾವತಿ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಮೇಳದವರಿಂದ “ಕುಲದೈವೋ ಬ್ರಹ್ಮ” ಎಂಬ ತುಳು ಯಕ್ಷಗಾನ ಪ್ರದರ್ಶನ ನಡೆಯಿತು.

  •  

Leave a Reply

error: Content is protected !!