ಪಾಂಡಿಬೆಟ್ಟು -ಕೋಣಾಲು ಶ್ರೀ ಶಿವಗಿರಿ ಅಯ್ಯಪ್ಪ ಭಜನಾ ಸೇವಾ ಸಂಘ(ರಿ) ಇದರ 42ನೇ ವರ್ಷದ ಮಕರ ಸಂಕ್ರಾಂತಿ ಉತ್ಸವ ಮತ್ತು 25ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ಅವರು ಮಾತನಾಡಿ ನಮ್ಮ ಪವಿತ್ರ ಗ್ರಂಥಗಳಾದ ಶ್ರೀ ಮಹಾಭಾರತ ಮತ್ತು ರಾಮಾಯಣ ಮಹಾ ಕಾವ್ಯಗಳು ನಮ್ಮ ಪವಿತ್ರ ಹಿಂದೂ ಧರ್ಮದ ಎರಡು ಕಣ್ಣುಗಳಿದ್ದಂತೆ ಈ ಗ್ರಂಥಗಳಲ್ಲಿನ ಸಾರವನ್ನು ಅರಿತು ನಮ್ಮ ಯುವ ಪೀಳಿಗೆಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ ಧರ್ಮವು ನಾವು ಮಾಡುವ ಕರ್ಮದಲ್ಲಿ ಇರುತ್ತದೆ ನಿಸ್ವಾರ್ಥ ಸೇವಾ ಮನೋಭಾವದಿಂದ ಮಾಡುವ ಕಾರ್ಯ ಭಗವಂತನಿಗೆ ಅರ್ಪಿತವಾಗುತ್ತದೆ. ಈ ಶಿವಗಿರಿಯಲ್ಲಿ 42 ವರ್ಷಗಳ ಹಿಂದೆ ಇಲ್ಲಿನ ಹಿರಿಯರು ಮಾಡಿದ ನಿಸ್ವಾರ್ಥ ಸೇವೆ ಇಂದು ನಮ್ಮ ಎಲ್ಲಾ ಹಿಂದೂ ಬಾಂಧವರು ಒಟ್ಟು ಸೇರಿ ಶ್ರೀ ಅಯ್ಯಪ್ಪನನ್ನು ಆರಾಧನೆ ಮಾಡುವ ಅವಕಾಶವನ್ನು ಶ್ರೀ ದೇವರು ಕಲ್ಪಿಸಿ ಕೊಟ್ಟಿದ್ದಾರೆ ಇಲ್ಲಿ ಧಾರ್ಮಿಕ ಒಗ್ಗಟ್ಟು ಮತ್ತು ಸಾಮರಸ್ಯ ಎಲ್ಲರನ್ನು ಒಟ್ಟು ಸೇರಿಸಿದೆ ಇದುವೇ ಧರ್ಮ ರಕ್ಷಣೆಯ ಮಹತ್ಕಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಿವಗಿರಿ ಅಯ್ಯಪ್ಪ ಭಜನಾ ಸೇವಾ ಸಂಘ(ರಿ)ಅಧ್ಯಕ್ಷರಾದ ಕೆ.ಕುಮಾರನ್ ಪಾಂಡಿಬೆಟ್ಟು ವಹಿಸಿದ್ದರು. ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರಾದ ತಿಮ್ಮಪ್ಪ ಗೌಡ ಕಾರ್ಯತ್ತಡ್ಕ. ಗೌರವಾಧ್ಯಕ್ಷರಾದ ಪ್ರಭಾನಂದ ಗೌಡ ಹೊಸಮನೆ, ಉಪಾಧ್ಯಕ್ಷರಾದ ಸುಂದರ ಗೌಡ.ಯನ್, ಎ.ನೋಣಯ್ಯ ಪೂಜಾರಿ ಅಂಬರ್ಜೆ, ಕಾರ್ಯದರ್ಶಿ ಲೋಕೇಶ್. ಪಿ ದೇವಾಡಿಗ ಗಾಣದಕೊಟ್ಟಿಗೆ, ಜೊತೆ ಕಾರ್ಯದರ್ಶಿ ವಿನಯ್ ಆರ್ಲ, ಪುರುಷೋತ್ತಮ ಬರಮೇಲು, ಕೋಶಾಧಿಕಾರಿ ಬಾಬು.ಪಿ ಪಾಂಡಿಬೆಟ್ಟು ಉಪಸ್ಥಿತರಿದ್ದರು.
ಶಮಿ ಲೋಕೇಶ್ ಗಾಣದಕೊಟ್ಟಿಗೆ ಸ್ವಾಗತಿಸಿದರು, ಪುಷ್ಪಾ ಜಯಂತ್ ಪಾಂಡಿಬೆಟ್ಟು ವರದಿ ವಾಚಿಸಿದರು. ಡಿ.ಲಿಂಗಪ್ಪ ಗೌಡ ದರ್ಖಾಸ್ ಕಾರ್ಯಕ್ರಮ ನಿರೂಪಿಸಿದರು ಪ್ರವೀಣ ಎಸ್.ಎಂ.ಮಣ್ಣಮಜಲು ವಂದಿಸಿದರು.
ಧಾರ್ಮಿಕ ಕಾರ್ಯಕ್ರಮ:
ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಹೋಮ, ಸತ್ಯನಾರಾಯಣ ಪೂಜೆ. ಶ್ರೀ ಶ್ರೀನಿವಾಸ ಬಡೆಕ್ಕಿಲ್ತಾಯ ಅರ್ಚಕರು ಶ್ರೀ ಷಣ್ಮುಖ ದೇವಸ್ಥಾನ ಕಾಂಚನ ಪೆರ್ಲ, ಅಲಂಕಾರ ಇವರ ನೇತೃತ್ವದಲ್ಲಿ ಸೌಪರ್ಣಿಕಾ ಕಲಾ ಕೇಂದ್ರ ಶರವೂರು ಇವರಿಂದ ಚಂಡೆ ವಾದನ. ಮಧ್ಯಾಹ್ನ ಅನ್ನ ಸಂತರ್ಪಣೆ ಸಂಜೆ ಭಜನಾ ಕಾರ್ಯಕ್ರಮ, ಕುಣಿತ ಭಜನೆ, ಮಹಾ ಮಂಗಳಾರತಿ ನಡೆಯಿತು.