ನೆಲ್ಯಾಡಿ: ಕರ್ನಾಟಕ ರಾಜ್ಯದ ಏಕೈಕ ಅಧಿಕೃತ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ 17ನೇ ಶುಕ್ರವಾರದಂದು ದೇವ ಸಾನಿಧ್ಯದ ಸಂಕೇತವಾಗಿ ಧರ್ಮಗುರು ವಂ.ಶಾಜಿ ಮಾತ್ಯು ದ್ವಜಾರೋಹಣ ಮಾಡುವುದರ ಮುಖಾಂತರ ಅಧಿಕೃತ ಆರಂಭ ನೀಡಲಾಯಿತು.
ನವ ದಿನಗಳ ನೋವೇನಾ ಪ್ರಾರ್ಥನೆ ಮತ್ತು ತಿರು ಶೇಷಿಪ್ಪ್ ವಣಕ್ಕಕ್ಕಾಗಿ ನೂರಾರು ಮಂದಿ ಭಕ್ತರು ದಿನಮ್ ಪ್ರತಿ ಪ್ರಾರ್ಥನೆಗಳಲ್ಲಿ ಬಾಗಿಯಾಗಲಿದ್ದಾರೆ. ಧರ್ಮ ಪ್ರಾಂತ್ಯದ ಮತ್ತು ಕೇರಳದ ಪ್ರತಿಷ್ಟಿತ ಧಾರ್ಮಿಕ ಶ್ರೇಷ್ಠರು ಪೂಜಾವಿಧಿ ಮತ್ತು ಪ್ರವಚನಗಳಿಗೆ ನೇತೃತ್ವ ನೀಡಲಿದ್ದಾರೆ.
23ನೇ ಗುರುವಾರ ವಾಹನಗಳ ಆಶೀರ್ವಾದ ನಡೆಯಲಿದೆ. ಮೃತರಿಗಾಗಿ ಪ್ರಾರ್ಥನೆ ಶುಕ್ರವಾರ ಸಂಜೆ ನಡೆಯಲಿದೆ. ಶನಿವಾರ ಸಂಜೆ 4.30ರಿಂದ ಬಲಿಪೂಜೆ ಸೌಖ್ಯ ಆರಾಧನೆ ಪ್ರವಚನ, ಆಕ್ಷೇರ್ಷಕ ಮೆರವಣಿಗೆ, ಕೇರಳದ ಸಾಂಸ್ಕೃತಿಕ ತಂಡ ದಿಂದ ವೈಭವದ ಸಂಗೀತ ಹಾಸ್ಯ ರಸ ಸಂಜೆ, ಡ್ರೋನ್ ಶೋ, ಬಾಂಡ್ ಸೆಟ್, ನಾಸಿಕ್ ಬಾಂಡ್ ಸಂಗೀತ ಪ್ರದರ್ಶನ, ಅನ್ನಸಂತರ್ಪಣೆ ನಡೆಯಲಿದೆ. 26ನೇ ಬಾನುವಾರ 9.30 ಕ್ಕೆ ನಡೆಯುವ ರಾಸ ಬಲಿಪೂಜೆ ಯೊಂದಿಗೆ ಹಬ್ಬಕ್ಕೆ ತೆರೆ ಬೀಳಲಿದೆ.