
ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ)ಕಡಬ ತಾಲೂಕು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ವತಿಯಿಂದ ನೆಲ್ಯಾಡಿ ವಲಯದಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ) ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಅವರು ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಜ್ಞಾನವಿಕಾಸ ಕಾರ್ಯಕ್ರಮದ ಉದ್ದೇಶ ಹಾಗೂ ಪ್ರಯೋಜನದ ಕುರಿತು ತಿಳಿಸುತ್ತಾ ಕಲಿತ ವಿದ್ಯೆ ನಿಮ್ಮನ್ನು ಧೈರ್ಯದಿಂದ ಬದುಕುವಂತೆ ಮಾಡುತ್ತದೆ ನೀವು ಮುಂದಕ್ಕೆ ಇತರರಿಗೆ ಉದ್ಯೋಗ ನೀಡುವಂತವರಾಗಬೇಕು ಎಂದು ಮಾಹಿತಿ ನೀಡಿ ಶುಭಹಾರೈಸಿದರು.

ನೆಲ್ಯಾಡಿ ಪ್ರಗತಿ ಬಂದು ಒಕ್ಕೂಟದ ವಲಯ ಅಧ್ಯಕ್ಷರಾದ ಕುಶಾಲಪ್ಪ ಗೌಡ ಅವರು ಅಧ್ಯಕ್ಷತೆಯನ್ನು ವಹಿಸಿದರು. ಕಾರ್ಯಕ್ರಮದಲ್ಲಿ ನೆಲ್ಯಾಡಿ ಒಕ್ಕೂಟದ ಅಧ್ಯಕ್ಷರಾದ ಸುಮಿತ್ರ ಕೌಕ್ರಾಡಿ, ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಗೌಡ, ಮಾದೇರಿ ಒಕ್ಕೂಟದ ಅಧ್ಯಕ್ಷರಾದ ಸೆಬಾಸ್ಟಿಯನ್.ಪಿ.ಜೆ, ವಲಯದ ಜನಜಾಗೃತಿ ಸದಸ್ಯರಾದ ತುಕಾರಾಮ್ ರೈ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿಯಾದ ರಮೇಶ್ ಬಾಣಜಾಲು, ಹೊಲಿಗೆ ತರಬೇತಿ ಶಿಕ್ಷಕಿಯಾದ ಗೀತಾ ಬೆಲ್ಲದ, ವಲಯ ಮೇಲ್ವಿಚಾರಕರಾದ ಆನಂದ.ಡಿ.ಬಿ ಉಪಸ್ಥಿತರಿದ್ದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ.ಜಿ ಪ್ರಾಸ್ತಾವಿಕ ಮಾತನಾಡಿದರು. ನವ್ಯಪ್ರಸಾದ್ ಅವರು ಕಾರ್ಯಕ್ರಮ ನಿರೂಪಿಸಿದರು. ಯಶ್ವಿನಿ ಸ್ವಾಗತಿಸಿದರು. ಭಾರತಿ ಹಾಗೂ ಹೊಲಿಗೆ ತರಬೇತಿ ಶಿಕ್ಷಕಿ ಗೀತಾ ಬೆಲ್ಲದ ಅವರು ಅನಿಸಿಕೆಯನ್ನು ವ್ಯಕ್ತಪಡಿಸಿದರು. ಚಂದ್ರಿಕಾ ವಂದಿಸಿದರು. ಸೇವಾ ಪ್ರತಿನಿಧಿಗಳಾದ ಹೇಮಾವತಿ.ಜೆ ಹಾಗೂ ನಮಿತಾ ಶೆಟ್ಟಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಕಾರ್ಯಕ್ರಮದಲ್ಲಿ 23 ಮಂದಿ ಹೊಲಿಗೆ ತರಬೇತಿ ಪಡೆದ ಅಭ್ಯರ್ಥಿಗಳು ಪ್ರಮಾಣ ಪತ್ರವನ್ನು ಸ್ವೀಕರಿಸಿದರು.





