
ನೆಲ್ಯಾಡಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ, ರಾಷ್ಟ್ರೀಯ ಬಾಯಿ ಆರೋಗ್ಯ ನೀತಿ ಕಾರ್ಯಕ್ರಮ, ಸಮುದಾಯ ಆರೋಗ್ಯ ಕೇಂದ್ರ ಕಡಬ, ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ, ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸಾಯನ್ಸ್ ಸ್, ಮಂಗಳೂರು ಸಹಯೋಗದೊಂದಿಗೆ ಉಚಿತ ದಂತ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರ ಫೆ.12ರಂದು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಶಿಬಿರವನ್ನು ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸಲಾಂ ಬಿಲಾಲ್ ಉದ್ಘಾಟಿಸಿದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ದ.ಕ ಜಿಲ್ಲೆ ಎನ್ ಓ ಎಚ್ ಪಿ ನೋಡಲ್ ಅಧಿಕಾರಿ ಡಾ.ಲವೀನಾ ನಾರೋನ, ಡಾ.ಅವಿನಾಶ್, ಎನ್ ಟಿ ಸಿ ಪಿ ಕೌನ್ಸಿಲರ್ ವಿಜಯ್ ಉಪಸ್ಥಿತರಿದ್ದರು.
ಸುಮಾರು 50ಕ್ಕಿಂತ ಅಧಿಕ ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.






