ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ 83 ಲಕ್ಷ ವೆಚ್ಚದ ಪುನರ್‌ವಸತಿ ಕೇಂದ್ರ: ಕೊಕ್ಕಡದಲ್ಲಿ ಭೂಮಿ ಪೂಜೆ

ಶೇರ್ ಮಾಡಿ

ಕೊಕ್ಕಡ :ಎಂಡೋಸಲ್ಫಾನ್ ಸಂತ್ರಸ್ತರ ಪುನರ್‌ವಸತಿ ಮತ್ತು ಭವಿಷ್ಯದ ಅನುಕೂಲಕ್ಕಾಗಿ ಎಂಆರ್‌ಪಿಎಲ್ (MRPL) ನಿಂದ 83 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕಟ್ಟಡದ ಭೂಮಿ ಪೂಜೆ ಮಾ.8 ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ನೆರವೇರಿಸಿದರು. ಕೊಕ್ಕಡ ಗ್ರಾಮ ಪಂಚಾಯತಿ ಸಮೀಪ ಈ ಪುನರ್‌ವಸತಿ ಕೇಂದ್ರ ನಿರ್ಮಾಣವಾಗಲಿದ್ದು, ಎಂಡೋ ಸಂತ್ರಸ್ತರ ಆರೋಗ್ಯದ ಕಲ್ಯಾಣಕ್ಕಾಗಿ ಈ ಯೋಜನೆ ಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, “”ಎಂಡೋಸಲ್ಫಾನ್ ಪೀಡಿತರು ಹತ್ತಾರು ವರ್ಷಗಳಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪೀಡಿತರ ಸಮಸ್ಯೆಗಳಿಗೆ ಸರಕಾರ ಗಂಭೀರವಾಗಿ ಗಮನಹರಿಸಿದೆ. ಅವರನ್ನು ಸರಕಾರದ ಬೆಂಬಲದೊಂದಿಗೆ ಇನ್ನಷ್ಟು ಸೌಲಭ್ಯಗಳಿಂದ ಸಮರ್ಥವಾಗಿ ಪುನರ್‌ವಸತಿ ಮಾಡುವುದು ನಮ್ಮ ಉದ್ದೇಶ. ಅವರು ಉತ್ತಮ ಆರೋಗ್ಯ ಹಾಗೂ ಪುನರ್‌ವಸತಿ ಪಡೆಯಲು ಇನ್ನಷ್ಟು ಅನುದಾನ ಮತ್ತು ಸೌಲಭ್ಯಗಳ ಒದಗಿಸಬೇಕು ಎಂಬ ದೃಷ್ಟಿಯಿಂದ ಹೋರಾಟ ಶ್ರೀಧರ್ ಅವರ ನೇತೃತ್ವದಲ್ಲಿ ಹಲವಾರು ಹೋರಾಟಗಳು ಸಫಲಗೊಂಡಿದ್ದು, ಇದರಿಂದ ಸಾಕಷ್ಟು ಸೌಲಭ್ಯಗಳು ದೊರೆಕುತ್ತಿವೆ. ಈ ಕಟ್ಟಡವು ಪೀಡಿತರ ಬದುಕಿಗೆ ಸಹಾಯ ಮಾಡಲಿದೆ” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ತಾಲೂಕು ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಕೊಕ್ಕಡ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಬೇಬಿ, ಉಪಾಧ್ಯಕ್ಷ ಪ್ರಭಾಕರ ಗೌಡ, ಮಾಜಿ ಉಪಾಧ್ಯಕ್ಷೆ ಪವಿತ್ರ, ಸದಸ್ಯರಾದ ಪುರುಷೋತ್ತಮ, ಲತಾ, ಪ್ರಮೀಳಾ, ವಿಶ್ವನಾಥ, ಜಾನಕಿ, ಜಗದೀಶ್, ಸಹಕಾರಿ ಸಂಘದ ನಿರ್ದೇಶಕರುಗಳಾದ ವಿಠ್ಠಲ ಭಂಡಾರಿ, ಶ್ರೀನಾಥ್ ಬಡಕೈಲು, ಕೊಕ್ಕಡ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಪ್ರಶಾಂತ್ ಪೂವಾಜೆ, ವಿಠಲ ಕುರ್ಲೆ, ಅರಸಿನಮಕ್ಕಿ ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ನವೀನ್ ರೆಖ್ಯ, ಎಂಡೋಸಲ್ಫಾನ್ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ್ ಕೆಂಗುಡೇಲು, ಹತ್ಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಕಾಶ್, ಡಾ. ಮೋಹನ್ ದಾಸ್ ಗೌಡ ಕೊಕ್ಕಡ, ಎಂಡೋಸಲ್ಫಾನ್ ಪೋಷಕರ ಸಮಿತಿ ಅಧ್ಯಕ್ಷೆ ರೇವತಿ ತಮ್ಹನಕರ್, ಪಟ್ರಮೆ ಗ್ರಾ.ಪಂ. ಅಧ್ಯಕ್ಷ ಮನೋಜ್, ಉಮೇಶ್ ಅಲಂಗೂರು, ಗುತ್ತಿಗೆದಾರ ಕಾರ್ತಿಕ್ ಕೊಕ್ಕಡ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೊಕ್ಕಡ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಪವಿತ್ರ ಸ್ವಾಗತಿಸಿದರು, ಯೋಗೀಶ್ ಆಲಂಬಿಲ ಕಾರ್ಯಕ್ರಮ ನಿರೂಪಿಸಿದರು.

  •  

Leave a Reply

error: Content is protected !!