ಮಾರ್ಚ್ 16ರಂದು ಸೇವಾಭಾರತಿಯ 20ನೇ ವಾರ್ಷಿಕೋತ್ಸವ ಹಾಗೂ ರಕ್ತದಾನ ಶಿಬಿರ

ಶೇರ್ ಮಾಡಿ

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಸೇವಾಭಾರತಿ ಸಂಸ್ಥೆಯು 20 ವರ್ಷಗಳ ಸೇವೆಯನ್ನು ಪೂರೈಸಿ 21ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಮಾರ್ಚ್ 16ರಂದು ಬೆಳಿಗ್ಗೆ 11:00 ಗಂಟೆಗೆ ಸೌತಡ್ಕದಲ್ಲಿರುವ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಸಂಭ್ರಮೋತ್ಸವದ ಅಂಗವಾಗಿ ಸಾಧಕರಿಗೆ ಗೌರವ ಸಮರ್ಪಣೆ, ನೂತನ ಟ್ರಸ್ಟಿಗಳ ಸೇರ್ಪಡೆ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10:00 ಗಂಟೆಗೆ ರಕ್ತದಾನ ಶಿಬಿರ ಆರಂಭಗೊಳ್ಳಲಿದ್ದು, ಮಂಗಳೂರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡ, ವೀರಕೇಸರಿ ಅನಾರು ಪಟ್ರಮೆ, ಕೇಸರಿ ಗೆಳೆಯರ ಬಳಗ ಕೊಕ್ಕಡ, ಹವ್ಯಕ ವಲಯ ಉಜಿರೆ ಇವುಗಳ ಸಹಭಾಗಿತ್ವದಲ್ಲಿ ನಡೆಯಲಿದೆ. ಶಿಬಿರವನ್ನು ಕೊಕ್ಕಡ ಶ್ರೀ ರಾಮ ಸೇವಾ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಉದ್ಘಾಟಿಸಲಿದ್ದಾರೆ.

20ನೇ ವಾರ್ಷಿಕ ಸಂಭ್ರಮೋತ್ಸವವನ್ನು ಉಡುಪಿ ರಾ.ಸ್ವ.ಸಂಘ ಪ್ರಚಾರಕ ಶ್ರೀ ದಾ. ಮ. ರವೀಂದ್ರ ಜೇಷ್ಠ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸೇವಾಭಾರತಿ ಅಧ್ಯಕ್ಷೆ ಶ್ರೀಮತಿ ಸ್ವರ್ಣಗೌರಿ, ಸಮಾಜ ಸೇವಕರು ಕಿರಣ್ ಚಂದ್ರ ಡಿ. ಪುಷ್ಪಗಿರಿ, ಗುರುವಾಯನಕರೆ ಎಕ್ಸೆಲ್ ಪದವಿಪೂರ್ವ ಕಾಲೇಜ್ ಅಧ್ಯಕ್ಷ ಸುಮಂತ್ ಕುಮಾರ್ ಬಿ. ಜೈನ್, ಭಾರತ ವಿಕಾಸ ಪರಿಷತ್, ಉಡುಪಿ ಭಾರ್ಗವ ಶಾಖೆಯ ಸಂಯೋಜಕರು ಹಾಗೂ ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ರೀ ವಸಂತ ಭಟ್ ,ಕೃಷಿಕರು ಕನ್ಯಾಡಿ IIಅರುಣ ಜೆ.ಎನ್. ರೆಬೆಲ್ಲೊ ,ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್, ಉಡುಪಿ ಗುರುಪ್ರಕಾಶ್ ಶೆಟ್ಟಿ, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್  ಅಧ್ಯಕ್ಷ ಕೆ. ಕೃಷ್ಣ ಭಟ್ ಭಾಗವಹಿಸಲಿದ್ದಾರೆ.

ಸೇವಾಧಾಮದ ಪುನಶ್ಚೇತನ ಕಾರ್ಯದ ಬಗ್ಗೆ ವಿವರಿಸಿ, ಕಳೆದ ವರ್ಷ 94 ಮಂದಿಯನ್ನು ಗುರುತಿಸಿ, 40 ಮಂದಿಯನ್ನು ಪುನಶ್ಚೇತನಗೊಳಿಸಲಾಗಿದ್ದು, 81 ಮಂದಿಗೆ ಗಾಲಿಕುರ್ಚಿ ಹಾಗೂ 20 ಮಂದಿಗೆ ಜೀವನೋಪಾಯ ಸೌಲಭ್ಯ ನೀಡಲಾಗಿದೆ.

ಇದೇ ಸಂದರ್ಭದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದಾದರೂ ಹಲವಾರು ಮಂದಿಗೆ ಉದ್ಯೋಗ ಭದ್ರತೆ ಒದಗಿಸಿರುವ ಶ್ರೀ ಆದಿತ್ಯ ಕಲ್ಲೂರಾಯ ಅವರನ್ನು ಸನ್ಮಾನಿಸಲಾಗುತ್ತದೆ.

ಸೇವಾಭಾರತಿ ಸಂಸ್ಥೆಯ 20 ವರ್ಷಗಳ ಸೇವಾ ಸಾಧನೆ ಹಾಗೂ ಮಾರ್ಚ್ 16ರ ವಾರ್ಷಿಕೋತ್ಸವಕ್ಕೆ ಎಲ್ಲರನ್ನು ಆತ್ಮೀಯವಾಗಿ ಸಂಘಟಕರು ಆತ್ಮೀಯವಾಗಿ ಪ್ರಕಟಣೆಯ ಮೂಲಕ ಆಹ್ವಾನಿಸುತ್ತಿದ್ದಾರೆ.

  •  

Leave a Reply

error: Content is protected !!