ಭಾರಿ ಮಳೆ: ಸಿಡಿಲಿನ ಅಬ್ಬರಕ್ಕೆ ತೆಂಗಿನ ಮರಕ್ಕೆ ಬೆಂಕಿ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಮತ್ತು ಕೊಕ್ಕಡ ಭಾಗಗಳಲ್ಲಿ ಭರ್ಜರಿ ಮಳೆ ಸುರಿಯುತ್ತಿದ್ದು, ಸಂಜೆಯ ವೇಳೆಗೆ ಗುಡುಗು-ಸಿಡಿಲಿನ ಅಬ್ಬರ ಹೆಚ್ಚಾಯಿತು.

ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣದಲ್ಲಿ ಸಂಜೆ 5 ಗಂಟೆಯಿಂದ ಭಾರೀ ಮಳೆಯಾಗತೊಡಗಿತು. ಸಿಡಿಲು-ಗುಡುಗಿನ ತೀವ್ರತೆಯಿಂದ ನೆಲ್ಯಾಡಿ ಹೃದಯ ಭಾಗದಲ್ಲಿರುವ ಹೋಟೆಲ್ ಸುಬ್ರಹ್ಮಣ್ಯ ವಿಳಾಸದ ಹಿಂಬದಿಯ ತೆಂಗಿನ ಮರಕ್ಕೆ ಬೆಂಕಿ ಹತ್ತಿಕೊಂಡಿದೆ.

ಇತ್ತೀಚೆಗೆ ಉರಿ ಬಿಸಿಲು ಮತ್ತು ಸೆಕೆಯಿಂದ ಪೀಡಿತವಾಗಿದ್ದ ಜನತೆಗೂ, ಪರಿಸರಕ್ಕೂ ಈ ಮಳೆ ತಂಪೇರಿದೆ.

  •  

Leave a Reply

error: Content is protected !!