ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ವಾರ್ಷಿಕ ನೇಮೋತ್ಸವದ ಆಮಂತ್ರಣ

ಶೇರ್ ಮಾಡಿ

ನೇಸರ ಮಾ.05 :ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ವಾರ್ಷಿಕ ನೇಮೋತ್ಸವವು ಇದೇ ಬರುವ ಸ್ವಸ್ತಿ |ಶ್ರೀ ಪ್ಲವ ನಾಮ ಸಂವತ್ಸರದ ಮೀನ ಮಾಸ ಸುಗ್ಗಿ ಹುಣ್ಣಿಮೆ 03 ದಿನಾಂಕ 17 .03 .2022 ನೇ ಗುರುವಾರದಿಂದ ದಿನಾಂಕ 20 .03 .2022 ನೇ ಆದಿತ್ಯವಾರದವರೆಗೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಹಾಗೂ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ,ಸುಬ್ರಹ್ಮಣ್ಯ ಮಠ ಇವರ ಆಶೀರ್ವಾದದೊಂದಿಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜರಗಲಿರುವುದು.

ಕ್ಷೇತ್ರ ಪರಿಚಯ

ದಕ್ಷಿಣ ಕನ್ನಡ ಜಿಲ್ಲೆಯ (ತುಳುನಾಡಿನ ) ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೂಜಿಬೈಲು(ಧರ್ಮಸ್ಥಳ -ಪೆರಿಯಶಾಂತಿ -ಮರ್ದಾಳ -ಸುಬ್ರಮಣ್ಯ ರಾಜ್ಯ ರಸ್ತೆಯಲ್ಲಿ ಗೋಳಿಯಡ್ಕದಿಂದ ಮೂರು ಕಿಲೋಮೀಟರು ದೂರ ) ಎಂಬ ಪ್ರಕೃತಿ ದತ್ತವಾದ ಪ್ರದೇಶದಲ್ಲಿ ನೆಲೆಯಾಗಿರುವ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದು ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ
ನಂಬಿದ ಭಕ್ತರನ್ನು ಕೈಬೀಸಿ ಕರೆದುಕೊಂಡು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದಲ್ಲಿ ನಂಬಿದ ಭಕ್ತರ ಮನೋಇಷ್ಟಾರ್ಥ ಈಡೇರುತ್ತದೆ .
ಭಕ್ತರ ಇಷ್ಟಾರ್ಥಗಳಾದ ಅರೋಗ್ಯ ,ಸುಖ ದಾಂಪತ್ಯ ಜೀವನ ,ಕಂಕಣ ಭಾಗ್ಯ ,ಸಂತಾನ ವೃದ್ಧಿ ,ಉದ್ಯೋಗ ,ವ್ಯಾಪಾರ ವ್ಯವಹಾರಗಳ ವೃದ್ಧಿಗೆ ಉಳ್ಳಾಲ್ತಿ ಅಮ್ಮನವರನ್ನು ಪ್ರಾರ್ಥಿಸಿದಲ್ಲಿ ಅತೀ ಶೀಘ್ರ ಸಂಕಷ್ಟ್ರ ಪರಿಹಾರವಾಗುತ್ತದೆ .ಶ್ರೀ ಕ್ಷೇತ್ರದ ನಾಗಬನವು ಪ್ರಕೃತಿದತ್ತವಾದ ನಾಗರ ಬೆತ್ತಗಳಿಂದ ಕಂಗೊಳಿಸುತ್ತಿದೆ .ಕ್ಷೇತ್ರದಲ್ಲಿ ಪ್ರತಿ ವರ್ಷದ ಸುಗ್ಗಿ ಹುಣ್ಣಮೆಗೆ ವಾರ್ಷಿಕ ಜಾತ್ರೆ ಸಂಪನ್ನಗೊಳ್ಳುತ್ತದೆ

[foogallery id=”639″]

ನೇಸರ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ

 

 

–ಜಾಹೀರಾತು–

Leave a Reply

error: Content is protected !!