

ನೆಲ್ಯಾಡಿ: ಕಡಬ ತಾಲೂಕು ರಾಮಕುಂಜ ಗ್ರಾಮದ ಸಂಪ್ಯಾಡಿಯ ದಿವಂಗತ ತೋಟ ಸುಬ್ರಾಯ ಭಟ್ ಅವರ ಧರ್ಮಪತ್ನಿ ಶ್ರೀಮತಿ ಭಾಗೀರಥಿ (88) ಅವರು ಬುಧವಾರ ಸಾಯಂಕಾಲ ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ಕೃಷಿ ಕುಟುಂಬದಿಂದ ಬಂದಿದ್ದ ಅವರು ಜೀವನವಿಡೀ ತಾನೂ ಕುಟುಂಬವೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಅವರಿಗೆ ಪುತ್ರರಾದ ಕೃಷಿಕ ಟಿ. ನಾಗರಾಜ ಭಟ್, ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ., ರಾಮಕುಂಜೇಶ್ವರ ಸಂಸ್ಕೃತ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಟಿ. ನಾರಾಯಣ ಭಟ್, ಚೆನ್ನೈ ನಿವಾಸಿ ಟಿ. ಕೃಷ್ಣಮೂರ್ತಿ, ಕೃಷಿಕ ಟಿ. ಹರೀಶ್ ಭಟ್, ಪುತ್ರಿಯರಾದ ಟಿ. ಲಾವಣ್ಯ ಮತ್ತು ಟಿ. ಗೀತಾ ಇದ್ದಾರೆ. ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅವರು ಅಗಲಿದ್ದಾರೆ.
ಮೃತರ ಮನೆಗೆ ಹಲವಾರು ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ವಿವಿಧ ಕ್ಷೇತ್ರಗಳ ಗಣ್ಯರು, ಬಂಧುಮಿತ್ರರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.










