ನೆಲ್ಯಾಡಿಯಲ್ಲಿ ನೂತನ ಲೈಫ್ ಕೇರ್ ಕ್ಲಿನಿಕ್ ಶುಭಾರಂಭ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿಯ ಅಭಿವೃದ್ಧಿಗೆ ವೇಗ ನೀಡುವ ಹಾಗೂ ಜನಸಾಮಾನ್ಯರಿಗೆ ಕೈಗೆ ಟುಕುವ ದರದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ಆರಂಭಗೊಂಡ ಲೈಫ್ ಕೇರ್ ಕ್ಲಿನಿಕ್ ಯಶಸ್ವಿಯಾಗಲಿ ಎಂದು ಹಾರೈಸಲಾಯಿತು. ನೆಲ್ಯಾಡಿ ಬೆಥನಿ ಚರ್ಚ್ ರಸ್ತೆಯ ಸಮೀಪದಲ್ಲಿರುವ ಈ ಕ್ಲಿನಿಕ್‌ನ್ನು, ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂದನೀಯ ಫಾ. ಶಾಜಿ ಮಾತ್ಯು ಉದ್ಘಾಟಿಸಿದರು.

ಡಾ. ಸ್ವೀನಾ ಪ್ರಮೋದ್ ಅವರ ಮುಂದಾಳುತ್ವದಲ್ಲಿ ಆರಂಭಗೊಂಡಿರುವ ಈ ಕ್ಲಿನಿಕ್, ಸ್ಥಳೀಯರಿಗೆ ಉತ್ತಮ ಆರೋಗ್ಯ ಸೇವೆ ನೀಡಲಿದೆ. ಡಾ. ಸ್ವೀನಾ ಪ್ರಮೋದ್ ಅವರು B.A.M.S ಪದವಿದಾರರಾಗಿದ್ದು, ಉಡುಪಿಯ ಪ್ರಸಿದ್ಧ ಖಾಸಗಿ ಆಸ್ಪತ್ರೆಗೆ ವೈದ್ಯೆ ಆಗಿದ್ದರು. ತಮ್ಮ ಸ್ವಗ್ರಾಮದಲ್ಲಿ ಸೇವೆ ಮಾಡುವ ಉದ್ದೇಶದಿಂದ ಅವರು, ಈಗ ನೆಲ್ಯಾಡಿಯಲ್ಲಿ ಕ್ಲಿನಿಕ್ ಆರಂಭಿಸಿದ್ದಾರೆ.

ಅವರು P.G.D.C ಮತ್ತು F.A.G.E ಪದವಿಗಳನ್ನೂ ಪಡೆದಿದ್ದು, ಬಾಣಂತಿಯರ ಆರೈಕೆಯಲ್ಲಿ ವಿಶೇಷ ಸೇವೆ ನೀಡಲಿದ್ದಾರೆ.

  •  

Leave a Reply

error: Content is protected !!