

ನೆಲ್ಯಾಡಿ :ಕಾಶ್ಮೀರದಲ್ಲಿ ಪಹಲ್ಗಾಮ್ ಸಮೀಪದ ಬೈಶರನ್ ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಮನ ಬಂದಂತೆ ಗುಂಡು ಹಾರಿಸಿ 28ಮಂದಿಯ ಸಾವಿಗೆ ಕಾರಣವಾದ ದುಷ್ಕ್ರತ್ಯ ವನ್ನು ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂ.ಫಾ.ಶಾಜಿ ಮಾತ್ಯು ಉಗ್ರವಾಗಿ ಖಂಡಿಸಿದ್ದಾರೆ.

ದಾಳಿಗೆ ತುತ್ತಾದವರಿಗೆ ಸಂತಾಪ ವನ್ನು ಸೂಚಿಸುತ್ತಾ ದಾಳಿ ಕಾರಣರಾದವರನ್ನು ಹುಡುಕಿ ಶಿಕ್ಷಸಿ ಇಂತಹ ದಾಳಿಗಳು ಮಾರುಕಳಿಸದಂತೆ ಉಗ್ರ ಕ್ರಮವನ್ನು ಜರಗಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.











