ಬಜಪೆಯಲ್ಲಿ ಕೋಡಿಕೆರೆ ಸುಹಾಸ್ ಶೆಟ್ಟಿ ಯನ್ನು ಬರ್ಬರವಾಗಿ ಕಡಿದು ಕೊಲೆ

ಶೇರ್ ಮಾಡಿ

ಬಜಪೆ: ತಂಡವೊಂದು ವ್ಯಕ್ತಿಯೊಬ್ಬನನ್ನು ಬಹಿರಂಗವಾಗಿ ತಲವಾರಿನಿಂದ ಬರ್ಬರವಾಗಿ ಹತ್ಯೆ ನಡೆಸಿದ ಪ್ರಕರಣ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಪದವು ಜಂಕ್ಷನ್ ಬಳಿ ಗುರುವಾರ ರಾತ್ರಿ 8:45ರ ಸುಮಾರಿಗೆ ನಡೆದಿದೆ.

ಕೊಲೆಗೀಡಾದ ವ್ಯಕ್ತಿಯನ್ನು ಕಾಟಿಪಳ್ಳ – ಕೋಡಿಕೆರೆ ನಿವಾಸಿ ಸುಹಾಸ್ ಶೆಟ್ಟಿ (42) ಎಂದು ಗುರುತಿಸಲಾಗಿದ್ದು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದ್ದ ಫಾಜಿಲ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಓರ್ವ ಆರೋಪಿ ಎನ್ನಲಾಗಿದ್ದು ಗುಂಪೊಂದು ಆತನ ಚಲನ ವಲನಗಳನ್ನು ಗಮನಿಸಿ ಬುಧವಾರ ರಾತ್ರಿ ಬಜಪೆ ಕಡೆಗೆ ತೆರಳುತ್ತಿದ್ದಾಗ ಈ ಕೃತ್ಯ ನಡೆಸಿದೆ.

ಘಟನೆಯ ವಿವರ :
ಅತಿವೇಗದಿಂದ ಕಾರಿನಲ್ಲಿ ಬರುತ್ತಿದ್ದ ಸುಹಾಸ್ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬುದನ್ನು ಅರಿತುಕೊಂಡು ಕಿನ್ನಿಪದವು ಜಂಕ್ಷನ್ ನಲ್ಲಿ ಇರುವ ಸೆಲೂನೊಂದಕ್ಕೆ ತನ್ನ ಕಾರನ್ನು ನುಗ್ಗಿಸಿ ತಪ್ಪಿಸಿಕೊಳ್ಳಲ್ಲು ಯತ್ನಿಸಿದಾಗ ಹಿಂಬಾಲಿಸಿಕೊಂಡು ಬಂದಿದ್ದ ಗ್ಯಾಂಗ್ ಆತನನ್ನು ಬಹಿರಂಗವಾಗಿ ಎಳೆದುಹಾಕಿ ಬರ್ಬರವಾಗಿ ಕೊಚ್ಚಿ ಕೊಲೆಗೈದು ಪರಾರಿಯಾಗಿರುವುದಾಗಿ ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹಾಗೂ ಪೊಲೀಸ್ ಮೂಲಗಳು ತಿಳಿಸಿದ್ದು ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇರಿತಕ್ಕೊಳಗಾದ ಸುಹಾಸ್ ನನ್ನು ನಗರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಜನಪ್ರತಿನಿಧಿಗಳು, ಸಂಘಟನೆಗಳ ಪ್ರಮುಖರು ಹಾಗೂ ಭಾರೀ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದರು ಎಂದು ತಿಳಿದು ಬಂದಿದೆ.

  •  

Leave a Reply

error: Content is protected !!