

ನೆಲ್ಯಾಡಿ : 2024-25ರ ವಾರ್ಷಿಕ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು ಸಂತ ಜಾರ್ಜ್ ವಿದ್ಯಾಸಂಸ್ಥೆಗೆ ಆಂಗ್ಲ ಮಾಧ್ಯಮ ಶೇ. 100 ಹಾಗೂ ಕನ್ನಡ ಮಾಧ್ಯಮ ಶೇ. 96.8 ಫಲಿತಾಂಶ ಪಡೆದಿದೆ.
ಆಂಗ್ಲ ಮಾಧ್ಯಮ ವಿಭಾಗ:
35 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 2 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರೇಯಾ ಶೆಟ್ಟಿ(602), ಸಿಜಿ. ಎಂ. ಎಸ್(595), ಅಮಿನಾತು ರಿಝ (589), ಪುನೀತ್ ರೈ (565), ಅನ್ವಿತಾ ಕೆ.ಎ (563), ಮನ್ವಿತ್ (558), ತ್ರಿಶಾ ಪಿ.ಎಂ (556), ಫಾತಿಮಾ ಆಫೀಫಾ(535), ಶೃತೇಶ್ ಶೆಟ್ಟಿ (534), ಫಾತಿಮಾತ್ ತ್ಯೋಯಿಬಾ (534) ಅಂಕವನ್ನು ಪಡೆದಿದ್ದಾರೆ.

ಕನ್ನಡ ಮಾಧ್ಯಮ ವಿಭಾಗ:
62 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು 5 ವಿದ್ಯಾರ್ಥಿಗಳು ವಿಶಿಷ್ಟ ಶೈಲಿಯಲ್ಲಿ, 41 ಮಂದಿ ಪ್ರಥಮ ಶ್ರೇಣಿಯಲ್ಲಿ, 14 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶಮಿತ್ (580), ಹೇಮಶ್ರೀ (579), ಸುಪ್ರೀತಾ (550), ಶಿವಾನಿ (548), ಸಾನ್ವಿ ಡಿ. ಸಿ (545) ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.
ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಂಸ್ಥೆಯ ಸಿಬ್ಬಂದಿಗಳನ್ನು ಸಂಸ್ಥೆಯ ಕಾರ್ಯದರ್ಶಿ ರೆ.ಫಾ.ಅನೀಶ್ ಪಾರಾಶೆರಿಲ್, ಸಂಸ್ಥೆಯ ಸಂಚಾಲಕರಾದ ರೆ.ಫಾ.ನೋಮಿಸ್ ಕುರಿಯಾಕೋಸ್, ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಹಾಗೂ ಪ್ರಾಚಾರ್ಯರಾದ ಏಲಿಯಾಸ್ ಎಂ.ಕೆ, ಕನ್ನಡ ಮಾಧ್ಯಮದ ಮುಖ್ಯೋಪಾಧ್ಯಾಯರಾದ ಎಂ.ವೈ.ತೋಮಸ್, ಆಂಗ್ಲ ಮಾಧ್ಯಮ ವಿಭಾಗದ ಹರಿಪ್ರಸಾದ್ ತಿಳಿಸಿದ್ದಾರೆ.













