

ನೆಲ್ಯಾಡಿ: ನೆಲ್ಯಾಡಿ ಶ್ರೀ ರಾಮ ವಿದ್ಯಾಲಯ ತನ್ನ ಶ್ರೇಷ್ಟ ಶೈಕ್ಷಣಿಕ ಸಾಧನೆಯನ್ನು ಮುಂದುವರೆಸಿದ್ದು, ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 22 ವಿದ್ಯಾರ್ಥಿಗಳಲ್ಲಿ ಒಬ್ಬರು ಡಿಸ್ಟಿಂಕ್ಷನ್ ಮಾರ್ಕ್‌ಗಳೊಂದಿಗೆ ಉತ್ತೀರ್ಣರಾಗಿದ್ದರೆ, ಉಳಿದ 21 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಮನ್ವಿತ್ ಕುಮಾರ್(564), ಸೃಜನ್(531), ಪ್ರತೀಕ್ಷಾ.ಪಿ(525), ಸುಶಾಂತ್(521), ಮದ್ವಿತ್(500) ಅಂಕಗಳನ್ನು ಪಡೆದಿದ್ದಾರೆ.
ಶ್ರೇಷ್ಠ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷರಾದ ಡಾ.ಮುರಳಿಧರ, ಕಾರ್ಯದರ್ಶಿ ಮೂಲಚಂದ್ರ ಕಾಂಚನ ಮತ್ತು ಮುಖ್ಯಶಿಕ್ಷಕ ಗಣೇಶ್ ವಾಗ್ಲೆ ಅವರು ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಅಭಿನಂದಿಸಿದ್ದಾರೆ.














