



ನೆಲ್ಯಾಡಿ: ಪ್ರಜಾಪ್ರಭುತ್ವದ ಮೂಲ ಅಂಶಗಳಾದ ಚುನಾವಣಾ ಪ್ರಕ್ರಿಯೆ, ಮತದಾನ, ಜವಾಬ್ದಾರಿತ್ವ, ಮತ್ತು ಪ್ರತಿನಿಧಿ ಆಯ್ಕೆ ಎಂಬುದನ್ನು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ, ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ಜೂ.15ರಂದು ಅದ್ದೂರಿಯಾಗಿ ಜರಗಿತು. ಈ ಚುನಾವಣೆಯು ಕೇವಲ ಸಾಮಾನ್ಯ ಶೈಕ್ಷಣಿಕ ಚಟುವಟಿಕೆ ಮಾತ್ರವಲ್ಲದೆ, ವಿದ್ಯಾರ್ಥಿ ಜೀವನದಲ್ಲಿಯೇ ಪ್ರಜಾಪ್ರಭುತ್ವದ ಪ್ರಾಥಮಿಕ ಪಾಠವನ್ನೇ ಕಲಿಸಿತು.
ಚುನಾವಣೆ ಪ್ರಕ್ರಿಯೆವು ಕಾಲೇಜು ಹಾಗೂ ಪ್ರೌಢಶಾಲೆ ಕನ್ನಡ ಹಾಗೂ ಆಂಗ್ಲ ಮಾಧ್ಯಮ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಜರುಗಿತು. ಪ್ರತಿ ವಿಭಾಗದಲ್ಲೂ ಮತದಾನ ಪ್ರಕ್ರಿಯೆಗಾಗಿ ತಾರತಮ್ಯವಿಲ್ಲದ ಸಮಾನ ಅವಕಾಶ ಕಲ್ಪಿಸಲಾಯಿತು.
ಒಟ್ಟು 6 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಶಿಸ್ತುಬದ್ಧವಾಗಿ ಮತದಾನ ಪ್ರಕ್ರಿಯೆ ನಡೆಯಿತು. ಎಲ್ಲಾ ವಿದ್ಯಾರ್ಥಿಗಳೂ ತಮ್ಮ ಹಕ್ಕು ಚಲಾಯಿಸಲು ಉತ್ಸಾಹದಿಂದ ಭಾಗವಹಿಸಿದರು. ಮೂರು ಸುತ್ತುಗಳ ಮತ ಎಣಿಕೆ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯಿತು.
ಕಾಲೇಜು ವಿಭಾಗದಲ್ಲಿ ಅಧ್ಯಕ್ಷರಾಗಿ ಕು.ಆಯಿಷತ್ ಫಾಹಿಮಾ, ಪ್ರಧಾನ ಕಾರ್ಯದರ್ಶಿಯಾಗಿ ಸುದೀoದ್ರ, ಕನ್ನಡ ಮಾಧ್ಯಮದಲ್ಲಿ ಉಪಾಧ್ಯಕ್ಷರಾಗಿ ಕು.ಐಶ್ವರ್ಯ ಗೌಡ, ಕಾರ್ಯದರ್ಶಿಯಾಗಿ ಕು.ಕಾವ್ಯಶ್ರೀ, ಆಂಗ್ಲ ಮಾಧ್ಯಮ ವಿಭಾಗದಲ್ಲಿ ಉಪಾಧ್ಯಕ್ಷರಾಗಿ ಮಹಮದ್ ಆಶೀರ್, ಕಾರ್ಯದರ್ಶಿಯಾಗಿ ಕು.ಶಮ್ಯ ಆಯ್ಕೆಯಾಗಿರುತ್ತಾರೆ.
ಸಂಸ್ಥೆಯ ಕಾರ್ಯದರ್ಶಿ ರೆ.ಫಾ.ಅನಿಶ್ ಪಾರಶೇರಿಲ್, ಸಂಸ್ಥೆಯ ಸಂಚಾಲಕ ರೆ.ಫಾ.ನೋಮಿಸ್ ಕುರಿಯಕೋಸ್, ಕಾಲೇಜು ಪ್ರಾಂಶುಪಾಲರಾದ ಎಂ.ಕೆ.ಏಲಿಯಸ್, ಕನ್ನಡ ಮಾಧ್ಯಮದ ಮುಖ್ಯಶಿಕ್ಷಕ ಎಂ.ಐ.ತೋಮಸ್, ಆಂಗ್ಲಮಾಧ್ಯಮದ ಮುಖ್ಯಶಿಕ್ಷಕ ಹರಿಪ್ರಸಾದ್ ಕೆ., ಮುಖ್ಯ ಚುನಾವಣಾ ಆಯುಕ್ತರಾಗಿ ಉಪನ್ಯಾಸಕ ಮಧು ಎ.ಜೆ., ಕನ್ನಡ ಮಾಧ್ಯಮದಿಂದ ಅಧ್ಯಾಪಕರಾದ ವರ್ಗೀಸ್ ಫ್ರಾನ್ಸಿಸ್, ಆಂಗ್ಲ ಮಾಧ್ಯಮದಿಂದ ಕರುಣಾಕರ ಇವರುಗಳು ಕಾರ್ಯ ನಿರ್ವಹಿಸಿದರು. ಕಾಲೇಜು ಉಪನ್ಯಾಸಕರು ಮತ್ತು ಶಿಕ್ಷಕರು ಚುನಾವಣಾ ಸಿಬ್ಬಂದಿಗಳಾಗಿ ಸಹಕರಿಸಿದರು.
ಸಂಸ್ಥೆಯು ಈ ವಿಧಾನವನ್ನು ಕೇವಲ ಒಂದರ ಸಾಲಿನ ಚುನಾವಣೆಯಾಗಿ ನೋಡದೆ, ಭವಿಷ್ಯದ ಪ್ರಜ್ಞಾವಂತ, ಬದ್ಧತೆಯುಳ್ಳ ನಾಗರಿಕರನ್ನು ರೂಪಿಸಲು ಒಂದು ಅವಕಾಶವೆಂದು ಪರಿಗಣಿಸಿದೆ. ಹೀಗಾಗಿ, ಪ್ರತಿ ಹಂತವನ್ನು ನಿಷ್ಠೆಯಿಂದ, ನ್ಯಾಯಸಮ್ಮತವಾಗಿ ನಡೆಸಿದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳೂ ಗೌರವ ಸೂಚಿಸಿದ್ದಾರೆ.
-ರೆ.ಫಾ.ನೋಮಿಸ್ ಕುರಿಯಕೋಸ್, ಸಂಚಾಲಕರು ಸಂತ ಜಾರ್ಜ್ ಪದವಿಪೂರ್ವ ಕಾಲೇಜು, ನೆಲ್ಯಾಡಿ
ಇಂತಹ ಚುನಾವಣಾ ಪ್ರಕ್ರಿಯೆಗಳು, ಶಾಲಾ ಮತ್ತು ಕಾಲೇಜು ಮಟ್ಟದಲ್ಲಿಯೇ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಮಹತ್ವಪೂರ್ಣ ಹೆಜ್ಜೆಯಾಗಿದೆ. ನೆಲ್ಯಾಡಿಯ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ವಿದ್ಯಾರ್ಥಿ ಸಂಸತ್ ಚುನಾವಣೆಯು ಪ್ರಜಾಪ್ರಭುತ್ವದ ಸಂಸ್ಕಾರವನ್ನೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತಿದೆ.
-ಎಂ.ಕೆ.ಏಲಿಯಸ್, ಪ್ರಾಚಾರ್ಯರು ಸಂತ ಜಾರ್ಜ್ ಪದವಿಪೂರ್ವ ಕಾಲೇಜು, ನೆಲ್ಯಾಡಿ







