ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಸತ್ತಿನ ಚುನಾವಣೆ

ಶೇರ್ ಮಾಡಿ

ನೂಜಿಬಾಳ್ತಿಲ: ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ ಪ್ರಜಾಪ್ರಭುತ್ವ ಮಾದರಿಯ ಆಧಾರದ ಮೇಲೆ ಶಾಲಾ ಸಂಸತ್ತಿನ ಚುನಾವಣೆ ವಿಜೃಂಭಣೆಯಿಂದ ಜರಗಿತು. ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಕುರಿತು ಅರಿವು ಮೂಡಿಸಲು ಮತ್ತು ಜವಾಬ್ದಾರಿಯುತ ನಾಯಕತ್ವಕ್ಕೆ ಉತ್ತೇಜನ ನೀಡಲು ಈ ಮತದಾನದ ಪ್ರಯೋಗವು ಮಾಡಲಾಯಿತು.

ಮತಪತ್ರದ ಮೂಲಕ ಗುಪ್ತ ಮತದಾನ ವಿಧಾನದಲ್ಲಿ ಶಾಲಾ ನಾಯಕ, ಉಪನಾಯಕ, ವಿದ್ಯಾರ್ಥಿನಿ ಪ್ರತಿನಿಧಿ ಮತ್ತು ಸಹ ಪ್ರತಿನಿಧಿ ಹುದ್ದೆಗಳಿಗೆ ಚುನಾವಣೆ ನಡೆಯಿತು. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜಯಿಗಳಾದ ಅಭ್ಯರ್ಥಿಗಳಿಗೆ ಶ್ರೇಷ್ಠ ಅಭಿನಂದನೆ ಸಲ್ಲಿಸಲಾಯಿತು.

ಈ ಚುನಾವಣೆಯಲ್ಲಿ ವಿದ್ಯಾರ್ಥಿ ನಾಯಕರಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದ ಕೌಶಿಕ್, ಉಪನಾಯಕರಾಗಿ ಹತ್ತನೇ ತರಗತಿಯ ಯಶ್ವಿನ್, ವಿದ್ಯಾರ್ಥಿನಿ ಪ್ರತಿನಿಧಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದ ಕೆ.ಎಸ್.ಶ್ರೇಯಾ, ಸಹ ಪ್ರತಿನಿಧಿಯಾಗಿ ಹತ್ತನೇ ತರಗತಿಯ ಸಾನ್ವಿ ಎಸ್.ಎಂ. ಆಯ್ಕೆಯಾದರು.

ಸಂಸ್ಥೆಯ ನಿರ್ದೇಶಕರಾದ ಫಾ.ವಿಜೋಯ್ ವರ್ಗೀಸ್ ಅವರ ಮಾರ್ಗದರ್ಶನದಲ್ಲಿ, ಸಂಸ್ಥೆಯ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ಹಾಗೂ ಮುಖ್ಯಗುರುಗಳಾದ ಥಾಮಸ್ ಎ.ಕೆ ಅವರ ನೇತೃತ್ವದಲ್ಲಿ ಆಯೋಜಿಸಲಾಯಿತು. ಮುಖ್ಯ ಚುನಾವಣಾ ಅಧಿಕಾರಿಗಳಾಗಿ ಶ್ರೀಮತಿ ಜಿನ್ಸಿ ಜೋಸೆಫ್, ಬಿಜು ಕೆ.ಜೆ., ಹಾಗೂ ಶ್ರೀಮತಿ ಶಿಲ್ಪಾ.ಎ ಅವರ ಶಿಸ್ತಿನಿಂದ ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ಜರಗಿತು.

ಚುನಾವಣಾ ಕರ್ತವ್ಯ ನಿರ್ವಹಣೆಯಲ್ಲಿ ವಿದ್ಯಾರ್ಥಿಗಳಾದ ವೀಕ್ಷಾ, ನಿಶಾ, ಸರ್ಹನ್ ಹಾಗೂ ವಿಖ್ಯಾತ್ ಉತ್ತಮ ಸೇವೆ ಸಲ್ಲಿಸಿದರು. ಉಪನ್ಯಾಸಕ ವೃಂದ, ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಹಕರಿಸಿ ಈ ಪ್ರಕ್ರಿಯೆಯ ಯಶಸ್ಸಿಗೆ ಶ್ರಮಿಸಿದರು.

  •  

Leave a Reply

error: Content is protected !!