ಕಡಬ ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜು ರಕ್ಷಕ- ಶಿಕ್ಷಕ ಸಂಘದ ಸಭೆ

ಶೇರ್ ಮಾಡಿ

ಕಡಬ : ಕಡಬ ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ವರ್ಷದ ರಕ್ಷಕ- ಶಿಕ್ಷಕ ಸಂಘದ ಪ್ರಥಮ ಸಭೆ ಸಂಸ್ಥೆಯ ಸಭಾಭವನದಲ್ಲಿ ನೆರವೇರಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ.ಪ್ರಕಾಶ್ ಪಾವ್ಲ್ ಡಿಸೋಜ ರವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸಂಸ್ಥೆಯ ಪ್ರತಿ ಕಾರ್ಯ ಚಟುವಟಿಕೆಗಳಿಗೆ ಪೋಷಕರು ಸಹಕಾರ ನೀಡಬೇಕೆಂದು ಹೇಳಿದರು. ಕಳೆದ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಅವರು ಸಂಸ್ಥೆಯ ವತಿಯಿಂದ ಸನ್ಮಾನಿಸಿದರು.

ಪ್ರಾಂಶುಪಾಲರಾದ ಕಿರಣ್ ಕುಮಾರ್ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪನ್ಯಾಸಕಿ ಸುಜಾ.ವಿ.ಜೆ ಅವರು ಕಳೆದ ಸಭೆಗಳ ವರದಿ ವಾಚನ ಮಾಡಿದರು. ಉಪನ್ಯಾಸಕಿ ಮಮತಾ.ಎಂ ವಿಶಿಷ್ಟ ಶ್ರೇಣಿ ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ರಕ್ಷಕ- ಶಿಕ್ಷಕ ಸಂಘದ ನಿಕಟ ಪೂರ್ವ ಉಪಾಧ್ಯಕ್ಷರಾದ ಬಾಲಕೃಷ್ಣ ಬಿ ಹಾಗೂ ನೂತನ ಉಪಾಧ್ಯಕ್ಷರಾದ ಅಶ್ರಫ್ ಶೇಡಿಗುಂಡಿ ಅವರು ಅನಿಸಿಕೆ ವ್ಯಕ್ತಪಡಿಸಿದರು.

ಜೋಮ್ಜ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ನಿರ್ದೇಶಕರಾದ ಜೋಮನ್ ತಮ್ಮ ಸಂಸ್ಥೆಯಲ್ಲಿ ಲಭ್ಯವಿರುವ ಸಿಇಟಿ, ನೀಟ್ ಹಾಗೂ ಇತರ ಪರೀಕ್ಷಾ ತರಬೇತಿಗಳ ಕುರಿತು ಪೋಷಕರಿಗೆ ಮಾಹಿತಿ ನೀಡಿದರು.

ರಕ್ಷಕ -ಶಿಕ್ಷಕ ಸಂಘದ ಸಂಯೋಜಕರಾದ ರಾಜೇಶ್.ಎನ್ ಕಾರ್ಯಕ್ರಮ ನಿರ್ವಹಿಸಿ, ಉಪನ್ಯಾಸಕಿ ಚೈತ್ರ.ಬಿ ವಂದಿಸಿದರು.

  •  

Leave a Reply

error: Content is protected !!