ಸುಲ್ಕೇರಿ ಗಾರೆ ಕೆಲಸಗಾರ ಕಿಶೋರ್ ನೇಣು ಬಿಗಿದು ಆತ್ಮಹತ್ಯೆ

ಶೇರ್ ಮಾಡಿ

ಸುಲ್ಕೇರಿ: ಗಾರೆ ಕೆಲಸ ಮಾಡಿಕೊಂಡಿದ್ದ ಯುವಕನೊರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಲ್ಕೇರಿಯಲ್ಲಿ ಶುಕ್ರವಾರ ರಾತ್ರಿ ಜು. 4ರಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸುಲ್ಕೇರಿ ಗ್ರಾಮದ ಮುಡಿಪಿರೆ ನಿವಾಸಿ ಕಿಶೋರ್ (25) ಎಂದು ಗುರುತಿಸಲಾಗಿದೆ.

ಗಾರೆ ಕೆಲಸ ಹಾಗೂ ಕೃಷಿಯಲ್ಲಿ ಔಷಧಿ ಸಿಂಪಡಿಸುವ ಕೆಲಸ ಮಾಡುತ್ತಿದ್ದ ಅವರು ಕಳೆದ ಒಂದು ವಾರದಿಂದ ಮಂಕಾಗಿದ್ದು ಹೆಚ್ಚು ಬೆರೆಯುತ್ತಿರಲಿಲ್ಲ ಎಂಬುದು ಆತನ ಸ್ನೇಹಿತರ ಹಾಗೂ ಕುಟುಂಬದವರ ಮಾಹಿತಿ. ಶುಕ್ರವಾರ ಮಧ್ಯಾಹ್ನದ ನಂತರದಿಂದ ಕಾಣೆಯಾಗಿದ್ದ ಕಿಶೋರ್ ರಾತ್ರಿ ಮನೆಗೆ ಬಾರದೇ ಇರುವುದನ್ನು ಗಮನಿಸಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಂಶಯದಿಂದ ಹುಡುಕಾಟ ಆರಂಭಿಸಿದರು. ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಆತನು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳಕ್ಕೆ ವೇಣೂರು ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  •  

Leave a Reply

error: Content is protected !!