


ಶಿಶಿಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಪೂಜ್ಯ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ, ಸಮಾಜಸೇವೆಯಲ್ಲಿ ಗುರುತಿಸಿಕೊಂಡ ಶಿಶಿಲದ ಬಿ. ಜಯರಾಮ ನೆಲ್ಲಿತ್ತಾಯರಿಗೆ ಅವರ ಸ್ವಗೃಹ ಶಿಶಿಲದ ಶಿವಕೀರ್ತಿ ನಿಲಯದಲ್ಲಿ ಪುಷ್ಪಗಿರಿ ತಂಡದ ವತಿಯಿಂದ ಭಾನುವಾರ ರಂದು ಗೌರವಾನ್ವಿತ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಡಿ ಪುಷ್ಪಗಿರಿ ಅವರು ಜಯರಾಮ ನೆಲ್ಲಿತ್ತಾಯರ ಸೇವಾ ಚಟುವಟಿಕೆಗಳನ್ನು ಪ್ರಶಂಸಿಸಿದರು. “ಅವರ 41 ವರ್ಷಗಳ ಸೇವೆಯು ಧರ್ಮಸ್ಥಳ ಯೋಜನೆಯ ಮೌಲ್ಯಾಧಾರಿತ ಕಾರ್ಯಕ್ಷಮತೆಯ ಸಾಕ್ಷಿಯಾಗಿದ್ದು, ಸಮಾಜ ಸೇವೆ, ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ಮತ್ತು ಶ್ರದ್ಧಾ ಪೂರ್ವಕ ಸಾಮಾಜಿಕ ಜವಾಬ್ದಾರಿಗಳಲ್ಲಿ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಸರಳ ಬದುಕು, ನಿಷ್ಠೆ ಹಾಗೂ ಎಲ್ಲರೊಂದಿಗೆ ಬೆರೆತು ಬಾಳುವ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ,” ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಪುಷ್ಪಗಿರಿ ತಂಡದ ಸದಸ್ಯರು ಹಾಗೂ ಗ್ರಾಮದ ಹಿಂದೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









