


ಉಪ್ಪಿನಂಗಡಿ: ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್( ರಿ), ಜೇಸಿಐ ಉಪ್ಪಿನಂಗಡಿ,ರೋಟರಿ ಕ್ಲಬ್ ಉಪ್ಪಿನಂಗಡಿ, ಟೀಮ್ ದಕ್ಷಿಣ ಕಾಶಿ ಉಪ್ಪಿನಂಗಡಿ, ಬಿ.ಎಂ.ಎಸ್ ಆಟೋ ಚಾಲಕ ಮಾಲಕರ ಸಂಘ ಉಪ್ಪಿನಂಗಡಿ ಇದರ ಜಂಟಿ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಸೆಂಟರ್ ಪುತ್ತೂರು, ಸಮುದಾಯ ಆರೋಗ್ಯ ಕೇಂದ್ರ ಉಪ್ಪಿನಂಗಡಿ, ಆರೋಗ್ಯ ರಕ್ಷಾ ಸಮಿತಿ ಉಪ್ಪಿನಂಗಡಿ ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಶಿಬಿರವನ್ನು ಟೀಮ್ ದಕ್ಷಿಣ ಕಾಶಿ ಉಪ್ಪಿನಂಗಡಿ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಉದ್ಘಾಟಿಸಿ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು. ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇದರ ಮೆಡಿಕಲ್ ಆಫೀಸರ್ ಡಾ.ಸೀತಾರಾಮ್ ಭಟ್ ರಕ್ತದ ಅವಶ್ಯಕತೆ, ರಕ್ತದ ಗುಂಪುಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ.ಕೃಷ್ಣಾನಂದ, ರೋಟರಿ ಕ್ಲಬ್ ಅಧ್ಯಕ್ಷರಾದ ಕೆನ್ಯೂಟ್ ಮಸ್ಕರೇನಸ್, ಬಿ ಎಂ ಎಸ್ ಆಟೋ ಚಾಲಕ ಮಾಲಕರ ಸಂಘ ಇದರ ಅಧ್ಯಕ್ಷರಾದ ಹರೀಶ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 38 ಯೂನಿಟ್ ರಕ್ತ ಸಂಗ್ರಹವಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ರೈ ಬಿ ಸ್ವಾಗತಿಸಿದರು. ಜೇಸಿಐ ನಿಕಟ ಪೂರ್ವ ಅಧ್ಯಕ್ಷ ಲವಿನಾ ಪಿ೦ಟೋ ವ೦ದಿಸಿದರು. ಟ್ರಸ್ಟ್ ಕಾರ್ಯದರ್ಶಿ ಕೆ.ವಿ ಕುಲಾಲ್ ಕಾರ್ಯಕ್ರಮ ನಿರೋಪಿಸಿದರು.









