

ಇಚಿಲಂಪಾಡಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ ಸಿ ಟ್ರಸ್ಟ್ (ರಿ) ಕಡಬ ತಾಲೂಕು ನೆಲ್ಯಾಡಿ ವಲಯದ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕೋತ್ಸವ ಕಾರ್ಯಕ್ರಮವು ಇಚಿಲಂಪಾಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಪ್ರತಿನಿಧಿ ರಮೇಶ್ ಬಾಣಜಾಲು ವಹಿಸಿದ್ದರು. ನೆಲ್ಯಾಡಿ ಹೊರಠಾಣೆ ಠಾಣಾಧಿಕಾರಿ ಪ್ರವೀಣ್ ಕೆ ಎಲ್ ಉದ್ಘಾಟನೆ ನೆರವೇರಿಸಿ ಶೌರ್ಯ ಘಟಕದ ಸೇವೆಯನ್ನು ಪ್ರಶಂಸಿಸಿದರು ಶುಭಹಾರೈಸಿದರು.
ಪುತ್ತೂರು ಪಿ.ಎಲ್. ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ಎಸ್ ಗೌಡ , ನೆಲ್ಯಾಡಿ ಶಾಖೆಯ ಉಪವಲಯ ಅರಣ್ಯಾಧಿಕಾರಿ ಕೆ.ಸುಬ್ರಹ್ಮಣ್ಯ, ಕಡಬ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಕಡಬ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕ್ಯಾಪ್ಟನ್ ಭವಾನಿ ಶಂಕರ್, ಮಾಸ್ಟರ್ ಪ್ರಶಾಂತ್, ನೆಲ್ಯಾಡಿ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವಲಯಾಧ್ಯಕ್ಷರಾದ ಕುಶಾಲಪ್ಪ ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು.
ನೆಲ್ಯಾಡಿ ಶಾಖೆ ಅರಣ್ಯಪಾಲಕ ದೇವಿಪ್ರಸಾದ್ ಅವರು ಶೌರ್ಯ ಸ್ವಯಂ ಸೇವಕರಿಗೆ ಉಪಯುಕ್ತವಾದ ಮಾಹಿತಿಯನ್ನು ನೀಡಿದರು.
ನೆಲ್ಯಾಡಿ ಒಕ್ಕೂಟದ ಸೇವಾಪ್ರತಿನಿಧಿ ಹೇಮಾವತಿ ಜೆ ಯವರ ನೇತೃತ್ವದಲ್ಲಿ ಶೌರ್ಯ ಘಟಕದ ಎಲ್ಲಾ ಸ್ವಯಂ ಸೇವಕರಿಗೆ ಅತಿಥಿಗಳಿಂದ ಶಾಲು ಹಾಕಿ ಸನ್ಮಾನಿಸಲಾಯಿತು. ಜೊತೆಗೆ ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರ ವತಿಯಿಂದ ಮೊಬೈಲ್ ಕವರ್ ಮತ್ತು ಕ್ಯಾಪ್‌ಗಳು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಶಾಖೆ ಅರಣ್ಯ ವೀಕ್ಷಕ ಡಿ.ಪಿ ಜನಾರ್ಧನ, ತುಕಾರಾಮ ರೈ ಹೊಸಮನೆ, ಜನಜಾಗೃತಿ ವೇದಿಕೆ ಸದಸ್ಯರು, ಒಕ್ಕೂಟ ಅಧ್ಯಕ್ಷರು, ಸೇವಾಪ್ರತಿನಿಧಿಗಳು ಹಾಗೂ ಶೌರ್ಯ ಘಟಕದ ಎಲ್ಲಾ ಸ್ವಯಂ ಸೇವಕರು ಉಪಸ್ಥಿತರಿದ್ದರು.
ಘಟಕ ಸ್ವಯಂಸೇವಕರಾದ ಅಮಿತ ಸ್ವಾಗತಿಸಿದರು. ಶೌರ್ಯದ ವಾರ್ಷಿಕ ವರದಿಯನ್ನು ಘಟಕ ಸಂಯೋಜಕಿ ನಮಿತಾ ಎಸ್ ಶೆಟ್ಟಿ ವಾಚಿಸಿದರು. ನೆಲ್ಯಾಡಿ ವಲಯದ ಮೇಲ್ವಿಚಾರಕ ಆನಂದ ಡಿ.ಬಿ ಕಾರ್ಯಕ್ರಮ ನಿರೂಪಿಸಿದರು. ಇಚಿಲಂಪಾಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ವೇದಾ.ಪಿ ವಂದಿಸಿದರು.










