ನೆಲ್ಯಾಡಿ ಶಿವಳ್ಳಿ ಸಂಪದ ವತಿಯಿಂದ ಆಟಿಡ್ ಒಂಜಿ ದಿನ: ಸಾಧಕರಿಗೆ ಸನ್ಮಾನ

ಶೇರ್ ಮಾಡಿ

ನೆಲ್ಯಾಡಿ: ಶಿವಳ್ಳಿ ಸಂಪದ ನೆಲ್ಯಾಡಿ ವಲಯದ ವತಿಯಿಂದ ಅದ್ದೂರಿಯಾಗಿ ‘ಆಟಿಡ್ ಒಂಜಿ ದಿನ’ ಈ ವಿಶೇಷ ಕಾರ್ಯಕ್ರಮವು ಸತೀಶ್ ಮೂಡಂಬಡಿತ್ತಾಯರ ‘ದುರ್ಗಾಶ್ರೀ’ ನಿವಾಸದಲ್ಲಿ ಜರುಗಿದ್ದು, ವಿಷ್ಣು ಸಹಸ್ರನಾಮ ಪಠಣದ ಮೂಲಕ ಧಾರ್ಮಿಕತೆಯೊಂದಿಗೆ ಚಾಲನೆ ನಡೆಯಿತು.

ಸಮಾಜದಲ್ಲಿ ವಿಶೇಷ ಸಾಧನೆಗೈದ ವ್ಯಕ್ತಿಗಳಿಗೆ ಈ ಸಂದರ್ಭದಲ್ಲಿ ಸನ್ಮಾನ ನಡೆಯಿತು. ಕೆಎಸ್‌ಆರ್‌ಟಿಸಿ ಹಾಗೂ ಭಾರಿ ವಾಹನ ತರಬೇತಿ ಸಂಸ್ಥೆಯಲ್ಲಿ ಶ್ರೇಷ್ಠ ಸಾಧನೆಗೈದ ಮುರಳಿಧರ ಆಚಾರ್, 37 ವರ್ಷಗಳಿಂದ ಪಾಕಶಾಸ್ತ್ರ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ ಲಕ್ಷ್ಮೀನಾರಾಯಣ ಗಡಿಗಲ್, ಧಾರ್ಮಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಹಾಗೂ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 3 ಬಾರಿಗೆ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುಬ್ರಹ್ಮಣ್ಯ ಶಬರಾಯ, ಮತ್ತು ಕಲಿಕೆಯಲ್ಲಿ ಪ್ರಶಂಸನೀಯ ಸಾಧನೆಗೈದ ಚೈತನ್ಯ ಗಡಿಗಲ್ ಅವರನ್ನು ಭಾವಪೂರ್ಣವಾಗಿ ಸನ್ಮಾನಿಸಲಾಯಿತು.

ಸತೀಶ್ ಮೂಡಂಬಡಿತ್ತಾಯ ಕಾರ್ಯಕ್ರಮದ ನುಡಿಗೋಷ್ಠಿಯಲ್ಲಿ ಆಟಿಕೂಟದ ಮಹತ್ವ ವಿವರಿಸಿದರು. ರವೀಂದ್ರ ಟಿ, ಆರ್ ವೆಂಕಟರಮಣ, ಆಶಾ ಜೋಗಿತ್ತಾಯ, ವನಿತಾ ಜೋಗಿತ್ತಾಯ ಸನ್ಮಾನಿತರನ್ನು ಪರಿಚಯಿಸಿ ಗೌರವಿಸಿದರು. ಶ್ರೇಯಸ್ ಕುಮಾರ್ ಪ್ರಾರ್ಥಿಸಿದರು. ಅಧ್ಯಕ್ಷ ರಾಜೇಶ್ ರಾವ್ ಸ್ವಾಗತಿಸಿದರು. ಶಾರದಾ ನೀತಿ ಸಂಹಿತೆಯ ಪಠಣ ನೆರವೇರಿಸಿದರು. ರವೀಂದ್ರ ಟಿ ಕಾರ್ಯಕ್ರಮ ನಿರೂಪಿಸಿದರು. ರಾಧಾಕೃಷ್ಣ ಮಂಡೆಗುಂಡಿ ವಂದಿಸಿದರು,

ಈ ವೇಳೆ ಶಿವಳ್ಳಿ ಸಂಪದ ಪುತ್ತೂರು ತಾಲೂಕಿನ ಅಧ್ಯಕ್ಷರಾದ ಸುಧೀಂದ್ರ ಕುದ್ದಣ್ಣಾಯ, ಕಾರ್ಯದರ್ಶಿಗಳಾದ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಕೋಶಾಧಿಕಾರಿಗಳಾದ ರಂಗನಾಥ್ ಉಂಗುರುಪುಳಿತ್ತಾಯ, ನಿಕಟ ಪೂರ್ವ ಅಧ್ಯಕ್ಷರಾದ ದಿವಾಕರ ನಿಡ್ವಣ್ಣಾಯ, ತಾಲೂಕು ಸಂಪದದ ಪದಾಧಿಕಾರಿಗಳಾದ ನಾಗರಾಜ ನಿಡ್ವಣ್ಣಾಯ, ಪ್ರಕಾಶ ಭಟ್, ಹರಿಪ್ರಸಾದ್ ದಾಳಿಂಬ ಹಾಗೂ ಊರಿನ ಶಿವಳ್ಳಿ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಮನೆ ದೇವರಿಗೆ ಪೂಜೆಯನ್ನು ಸಲ್ಲಿಸಿ ಶಿವಳ್ಳಿ ಬಾಂಧವರು ಮನೆಯಲ್ಲಿಯೇ ತಯಾರಿಸಿ ತಂದ ವಿವಿಧ ಖಾದ್ಯಗಳನ್ನು ಗಡಿಗಲ್ ಲಕ್ಷ್ಮೀನಾರಾಯಣ ಪೆರ್ಮೊದೆನ್ನಾಯರು ಅನ್ನಪೂರ್ಣಾ ದೇವಿಗೆ ದೀಪ ಬೆಳಗಿಸಿ ಸಮರ್ಪಿಸಿದ ಬಳಿಕ ಉಣ ಬಡಿಸಿದರು.

  •  

Leave a Reply

error: Content is protected !!