ನೆಲ್ಯಾಡಿ: ಹೊಸಮಜಲಿನಲ್ಲಿ ಆಟಿಡೊಂಜಿ ಸಡಗರ: ಕೆಸರಿನಲ್ಲಿ ತುಳು ಸಂಸ್ಕೃತಿಯ “ಆಟಿಡೊಂಜಿ ಕೆಸರ್ದ ಗೊಬ್ಬು”

ಶೇರ್ ಮಾಡಿ

ನೆಲ್ಯಾಡಿ: ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮಂಗಳೂರು ಹಾಗೂ ಅಶ್ವಥ್ಥ ಗೆಳೆಯರ ಬಳಗ (ರಿ.) ಹೊಸಮಜಲು-ನೆಲ್ಯಾಡಿಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಬಾಣಜಾಲು ಪರಿಸರದ ಗದ್ದೆಯಲ್ಲಿ “ಆಟಿಡೊಂಜಿ ಕೆಸರ್ದ ಗೊಬ್ಬು” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಂತ ಜಾರ್ಜ್ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯಶಿಕ್ಷಕ ಆರ್ ವೆಂಕಟ್ರಮಣ ಹಾಗೂ ನಿವೃತ್ತ ಶಿಕ್ಷಕ ವಿ.ಆರ್. ಹೆಗ್ಡೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಸಂಚಾಲಕರಾದ ಮುರಳಿ ನಾಯರ್ ಹಾಗೂ ಸಜಿತಾ ಅವರು ನೇತೃತ್ವ ವಹಿಸಿದರು.

ಬೆಳಗ್ಗಿನಿಂದ ಸಂಜೆಯವರೆಗೆ ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗದ್ದೆಯ ಕೆಸರಿನಲ್ಲಿ ಹಲವು ರೀತಿಯ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ತುಳು ನಾಡಿನ ಸೊಬಗನ್ನು ಸವಿದರು.

ಅಶ್ವಥ್ಥ ಗೆಳೆಯರ ಬಳಗದ ಗೌರವಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಅಧ್ಯಕ್ಷ ವಂದನ್, ಸದಸ್ಯರಾದ ದೇವದಾಸ್, ಜಯರಾಮ್, ಲೋಕೇಶ್, ಸೋನಿತ್, ನವೀನ್, ರಾಜೇಶ್ ಕಲಾಯಿ, ಯಶವಂತ್, ರೋಹಿತ್, ಶರೂನ್, ಶೈಲೇಶ್, ಮಿಥುನ್, ಅಶೋಕ, ರಾಜೇಶ್ ಕೆ, ರೋಷನ್, ಸುಂದರ ಬಿ ಹಾಗೂ ಇತರರು ಕಾರ್ಯಕ್ರಮದ ನಿರ್ವಹಣೆಯಲ್ಲಿ ಸಕ್ರಿಯ ಪಾಲ್ಗೊಂಡರು. ಇಂಡಿಯನ್ ಇನ್ಸ್ಟಿಟ್ಯೂಷನ್ ನ ಸಿಬ್ಬಂದಿಗಳಾದ ವಿನೀತ್, ಆಕಾಶ್, ಪ್ರತೀಕ್, ದಿತೇಶ್ ಹಾಗೂ ಇತರರು ಸಹಕರಿಸಿದರು.

  •  

Leave a Reply

error: Content is protected !!