

ಕೊಕ್ಕಡ:ಶಿಶಿಲ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಆ.5ರಂದು ಸಂಜೆ 4 ಗಂಟೆಯಿಂದ ಆರಂಭಗೊಂಡ ಭಾರಿ ಮಳೆ ರಣಭೀಕರ ಸ್ವರೂಪ ಪಡೆದು, ಹಲವು ಹಳ್ಳಿಗಳ ಸಂಪರ್ಕವನ್ನು ಕಡಿತಗೊಳಿಸಿದೆ.
ಶಿಶಿಲದ ಗುತ್ತು, ಪೇರಿಕೆ, ಅಮ್ಮುಡಂಗೆ ಮತ್ತು ಬದ್ರಿಜಾಲು ಹಳ್ಳಿಗಳ ಸಂಪರ್ಕ ಉಕ್ಕಿಹರಿಯುತ್ತಿರುವ ಕಾಲುವೆ ಹಾಗೂ ಸೇತುವೆಗಳ ಮೂಲಕ ಸಂಪೂರ್ಣವಾಗಿ ತಡೆಯಲ್ಪಟ್ಟಿದೆ. ಪರಿಣಾಮವಾಗಿ ಗ್ರಾಮಸ್ಥರು ತಮ್ಮ ಮನೆಗಳಿಗೆ ತೆರಳಲು ಪರದಾಡುವಂತಹ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಲದ ಅತಿವೃಷ್ಟಿಯಿಂದ ಶಿಶಿಲದ ಪ್ರಸಿದ್ಧ ದೇವಾಲಯದ ಒಳಾಂಗಣಕ್ಕೂ ನೀರು ನುಗ್ಗಿದ್ದು, ದೇವಸ್ಥಾನವು ಸಂಪೂರ್ಣ ಜಲಾವೃತಗೊಂಡಂತಾಗಿದೆ. ಇದರಿಂದ ಧಾರ್ಮಿಕ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿವೆ.










