ನೆಲ್ಯಾಡಿ ಜೆಸಿಐ ಘಟಕಕ್ಕೆ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಭೇಟಿ; ಶಾಶ್ವತ ಕೊಡುಗೆಯ ಲೋಕಾರ್ಪಣೆ

ಶೇರ್ ಮಾಡಿ

ನೆಲ್ಯಾಡಿ: ಜೆಸಿಐ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಜಿ ಎಫ್ ಎಸ್ ಅಂಕುರ್ ಜುಂಜುನ್ ವಾಲ ಅವರು ಮಂಗಳವಾರದಂದು ಜೆಸಿಐ ನೆಲ್ಯಾಡಿ ಘಟಕಕ್ಕೆ ಅಧಿಕೃತ ಭೇಟಿ, ಶಾಶ್ವತ ಕೊಡುಗೆ ಲೋಕಾರ್ಪಣೆ ಮತ್ತು ಸಭಾ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷರ ಆಗಮನದ ಹಿನ್ನೆಲೆ ಅವರನ್ನು ನೆಲ್ಯಾಡಿ ಪೇಟೆಯಲ್ಲಿ ಭವ್ಯವಾದ ವಾಹನ ಜಾಥಾ ಕಾರ್ಯಕ್ರಮದ ಮೂಲಕ ಭವ್ಯ ಸ್ವಾಗತ ನೀಡಲಾಯಿತು. ಬಳಿಕ ಜೆಸಿಐ ಘಟಕದಿಂದ ಶಾಶ್ವತ ಕೊಡುಗೆಯಾಗಿ ನೆಲ್ಯಾಡಿಯ ಗಾಂಧಿ ಮೈದಾನದಲ್ಲಿ ನಿರ್ಮಿಸಲಾಗಿರುವ 10 ಸಿಮೆಂಟ್ ಬೆಂಚುಗಳ ಲೋಕಾರ್ಪಣೆಯು ರಾಷ್ಟ್ರಾಧ್ಯಕ್ಷರಿಂದ ನೆರವೇರಿತು.

ಬಳಿಕ ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಅಧ್ಯಕ್ಷರಾದ ಜಿ ಎಫ್ ಎಸ್ ಅಂಕುರ್ ಜುಂಜುನ್ ವಾಲ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಜೇಸಿ ಸಂಸ್ಥೆಯು ಯುವ ಜನತೆಗೆ ತರಬೇತಿಯನ್ನು ನೀಡುವ ಮೂಲಕ ದೇಶಕ್ಕೆ ಉತ್ತಮ ಮಾನವ ಸಂಪನ್ಮೂಲವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಯುವ ಜನತೆ ದೇಶದ ಸಂಪತ್ತು ಅಂತಹ ಸಂಪತ್ತು ಸರಿಯಾದ ರೀತಿಯಲ್ಲಿ ಸದ್ಬಳಕೆ ಆಗಬೇಕಾದರೆ ಯುವಶಕ್ತಿಯನ್ನು ಪ್ರೇರೇಪಿಸುವ ಕೌಶಲ್ಯ ಭರಿತವಾದಂತಹ ತರಬೇತಿಗಳನ್ನು ಸಂಸ್ಥೆಯು ನೀಡುತ್ತಿರುವುದರಿಂದ ಜೆಸಿ ಸಂಸ್ಥೆಯು ಪ್ರಪಂಚದಲ್ಲಿ ಅಮೂಲಾಗ್ರ  ಸ್ಥಾನವನ್ನು ಪಡೆದುಕೊಂಡಿದೆ. ಮನುಕುಲದ ಸೇವೆಯೇ ಪರಮಧರ್ಮ ಎಂಬ ತತ್ವವನ್ನು ಹೊಂದಿರುವ ಜೇಸಿ ಸಂಸ್ಥೆ ಯುವ ಜನತೆಯಲ್ಲಿ ಗುಣಾತ್ಮಕ ಬದಲಾವಣೆಯನ್ನು ಸೃಷ್ಟಿಸಿ ಸದೃಢಗೊಳಿಸಲು ನಾಯಕತ್ವದ ಅಭಿವೃದ್ಧಿಯ ಅವಕಾಶಗಳನ್ನು ಒದಗಿಸುತ್ತದೆ. ಯುವಜನರ ಅಗ್ರಗಣ್ಯ ಜಾಗತಿಕ ಜಾಲವಾಗಿ ಹೊರಹೊಮ್ಮುವುದೇ ಜೆಸಿ ಸಂಸ್ಥೆಯ ಧ್ಯೇಯ ನೆಲೆ ಎಂದು ನುಡಿದರು. ಅಲ್ಲದೆ ನೆಲ್ಯಾಡಿ ಜೆಸಿಐ ಸಂಸ್ಥೆಯ ಅಧ್ಯಕ್ಷರಾದ ಜೆ ಎಫ್ ಪಿ ಡಾ.ಸುಧಾಕರ್ ಶೆಟ್ಟಿ ಅವರು ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಅಲ್ಲದೆ ನಿರ್ಮಿಸಿರುವ ಸಿಮೆಂಟ್ ಬೆಂಚುಗಳ ಆಸನವನ್ನು ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಲಾಂ ಬಿಲಾಲ್ ಅವರಿಗೆ ಹಸ್ತಾಂತರಿಸಿ ಜೆಸಿ ಅಧ್ಯಕ್ಷರ ಸಮಾಜ ಸೇವೆಯನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ಜೆಸಿಐ ವಲಯ15ರ ಅಧ್ಯಕ್ಷ ಅಭಿಲಾಷ್ ಬಿ.ಎ, ವಲಯ ಉಪಾಧ್ಯಕ್ಷರಾದ ಸಂತೋಷ್ ಕುಮಾರ್, ರಾಜ್ಯಾಧ್ಯಕ್ಷರ ಟೂರ್ ನಿರ್ದೇಶಕ ಕಾಶಿನಾಥ ಗೋಗಟೆ, ನೆಲ್ಯಾಡಿ ಜೆಸಿಐ ಅಧ್ಯಕ್ಷ ಡಾ.ಸುಧಾಕರ್, ನೆಲ್ಯಾಡಿ ಮಹಿಳಾ ಜೆಸಿಯ ಅಧ್ಯಕ್ಷೆ ಪ್ರಾವೀಣಿ ಸುಧಾಕರ್, ಕಾರ್ಯದರ್ಶಿ ನವ್ಯ ಪ್ರಸಾದ್ ಉಪಸ್ಥಿತರಿದ್ದರು.

ರಾಷ್ಟ್ರಾಧ್ಯಕ್ಷ ಜುಂಜುನ್ ವಾಲ ಹಾಗೂ ವಲಯಾಧ್ಯಕ್ಷ ಅಭಿಲಾಷ್ ಅವರನ್ನು ನೆಲ್ಯಾಡಿ ಜೆಸಿಐ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನೆಲ್ಯಾಡಿ ಜೆಸಿಐನ ಪೂರ್ವಾಧ್ಯಕ್ಷರುಗಳು, ಸದಸ್ಯರುಗಳು ಹಾಗೂ ಕಡಬ ಜೆಸಿಐನ ಪದಾಧಿಕಾರಿಗಳು ಉಪಸ್ಥಿತರಿದ್ದರು

ಪುರಂದರ ಗೌಡ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ವಿಶ್ವನಾಥ ಶೆಟ್ಟಿ ಜೇಸಿವಾಣಿ ವಾಚಿಸಿದರು. ನೆಲ್ಯಾಡಿ ಜೆಸಿಐ ಅಧ್ಯಕ್ಷ ಡಾ.ಸುಧಾಕರ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಅಬ್ರಹಾಂ ವರ್ಗೀಸ್ ರಾಷ್ಟ್ರಾಧ್ಯಕ್ಷರ ಪರಿಚಯವನ್ನು ಮಾಡಿದರು ಕಾರ್ಯದರ್ಶಿ ನವ್ಯ ಪ್ರಸಾದ್ ವಂದಿಸಿದರು.

  •  

Leave a Reply

error: Content is protected !!