

ಪುತ್ತೂರು: ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪೇರಮೊಗ್ರು ನಿವಾಸಿ ದಿ.ರಾಮಣ್ಣ ಶೆಟ್ಟಿ ಹಾಗೂ ಮೀನಾಕ್ಷಿ ದಂಪತಿ ಪುತ್ರ, ಪ್ರಗತಿಪರ ಕೃಷಿಕರಾದ ಮೋಹನ್‌ದಾಸ್ ಶೆಟ್ಟಿ (61ವ.)ರವರು ಅನಾರೋಗ್ಯದಿಂದ ಆ.3ರಂದು ಸ್ವಗೃಹದಲ್ಲಿ ನಿಧನರಾದರು.
ಮೋಹನ್‌ದಾಸ್ ಶೆಟ್ಟಿಯವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ ಜಯಂತಿ, ಪುತ್ರಿ ಸಂಧ್ಯಾ, ಅಳಿಯ ಗಣೇಶ್, ಮೊಮ್ಮಗ ಶಿವಾಂಸು, ಸಹೋದರರಾದ ಜಯಾನಂದ ಶೆಟ್ಟಿ, ದೇವದಾಸ್ ಶೆಟ್ಟಿ, ಸಹೋದರಿಯರಾದ ಮೋಹಿನಿ ಶೆಟ್ಟಿ, ಜಯಂತಿ ಶೆಟ್ಟಿ, ಉಮಾವತಿ ರೈ, ನೆಲ್ಯಾಡಿ ಜೆಸಿಐ ನಿಕಟಪೂರ್ವಾಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್, ನಂದಲತಾ ಶೆಟ್ಟಿಯವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.










