ನೆಲ್ಯಾಡಿ ಶ್ರೀರಾಮ ವಿದ್ಯಾಲಯ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಕಿರಣಚಂದ್ರ ಪುಷ್ಪಗಿರಿ ಭಾಗಿ

ಶೇರ್ ಮಾಡಿ

ನೆಲ್ಯಾಡಿ ಶ್ರೀ ರಾಮ ವಿದ್ಯಾಲಯ, ಚಾಮುಂಡೇಶ್ವರಿ ಭಜನಾ ಮಂಡಳಿ ದೊಂತಿಲ ಮತ್ತು ಮಾತೃಮಂಡಳಿ ನೆಲ್ಯಾಡಿ ಇದರ ಜಂಟಿ ಆಶ್ರಯದಲ್ಲಿ ಶುಕ್ರವಾರ ದಂದು 16ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ನಡೆಯಲಿದೆ.

ಈ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ಕಿರಣಚಂದ್ರ ಪುಷ್ಪಗಿರಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಪ್ರೀತಾ ರವಿಚಂದ್ರ ವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ವಿವೇಕಾನಂದ ಮಹಾವಿದ್ಯಾಲಯದ ಪ್ರಾದ್ಯಾಪಕಿ ಡಾ.ಗೀತಾ ಕುಮಾರಿ ಅವರು ನೀಡಲಿದ್ದಾರೆ. ಅತಿಥಿಗಳಾಗಿ ನೆಲ್ಯಾಡಿ ಅಶ್ವಿನಿ ಅಸ್ಪತ್ರೆಯ ವೈದ್ಯರಾದ ಡಾ. ಶಮಂತ್ ವೈ.ಕೆ. ಹಾಗೂ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಸ್ಕೂಲ್ ಕೌನ್ಸಿಲರ್ ನಿವೇದಿತಾ ಪ್ರಸನ್ನ ಭಾಗವಹಿಸಲಿದ್ದಾರೆ.

  •  

Leave a Reply

error: Content is protected !!