

ನೆಲ್ಯಾಡಿ: ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ಶನಿವಾರದಂದು ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.
ನೆಲ್ಯಾಡಿ ಮಂಡಳಿಯ ಸಹಕಾರ್ಯವಾಹ ಸಂಕೇತ್ ಶೆಟ್ಟಿಯವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಆಚರಿಸಲ್ಪಡುವ ಉತ್ಸವಗಳ ಉದ್ದೇಶವನ್ನು ವಿವರಿಸಿ, ರಕ್ಷಾಬಂಧನದ ಆಧ್ಯಾತ್ಮಿಕ ಅರ್ಥ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಸಮಾಜದ ಪಾತ್ರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಆಡಳಿತ ಮಂಡಳಿಯ ಕಾರ್ಯದರ್ಶಿ ಮೂಲಚಂದ್ರ ಕಾಂಚನ ಅವರು ನಮ್ಮ ಶ್ರದ್ಧಾ ಕೇಂದ್ರಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಪರಸ್ಪರ ರಕ್ಷಣೆಯ ಭಾವನೆ ಬೆಳೆಸಿ ಹೊಂದಿಕೊಂಡು ಬದುಕುವಂತೆ ಹಿತವಚನ ಹೇಳಿದರು. ಮುಖ್ಯಶಿಕ್ಷಕ ಗಣೇಶ್ ವಾಗ್ಲೆ ಅವರು ರಕ್ಷಾಬಂಧನದ ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಕ್ಷಾಬಂಧನದ ಸಾರವನ್ನು ಒಳಗೊಂಡ ಹಾಡುಗಳನ್ನು ಹಾಡಿ, ಆರತಿ ಬೆಳಗಿ, ತಿಲಕವಿಟ್ಟು, ಪರಸ್ಪರ ರಕ್ಷಾಸೂತ್ರವನ್ನು ಕಟ್ಟಿಕೊಂಡು ಭ್ರಾತೃತ್ವದ ಭಾವನೆ ಹಂಚಿಕೊಂಡರು.
ಯಶ್ವಿನ್ ಸ್ವಾಗತಿಸಿದರು, ಕುಮಾರಿ ರಮ್ಯ ವಂದಿಸಿದರು. ಕುಮಾರಿ ನವ್ಯ ಕಾರ್ಯಕ್ರಮವನ್ನು ನಿರೂಪಿಸಿದರು.










