ಕೊಕ್ಕಡ: ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ಹೊಸ ವ್ಯವಸ್ಥಾಪನಾ ಸಮಿತಿ – ಬಾಬು ಪುತ್ಯೆಮಜಲು ಅಧ್ಯಕ್ಷರಾಗಿ ಆಯ್ಕೆ

ಶೇರ್ ಮಾಡಿ

ಕೊಕ್ಕಡ: ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಪುತ್ತಿಗೆ ಶ್ರೀ ವಿಷ್ಣುಮೂರ್ತಿ ಪ್ರವರ್ಗ ಸಿ ದೇವಾಲಯದಲ್ಲಿ ಹಲವು ವರ್ಷಗಳಿಂದ ವ್ಯವಸ್ಥಾಪನಾ ಸಮಿತಿ ರಚನೆಯಾಗದೆ, ಆಡಳಿತಾಧಿಕಾರಿಯ ನೇಮಕಾತಿ ಮೂಲಕ ದೇವಾಲಯದ ಕಾರ್ಯಗಳು ಸಾಗುತ್ತಿದವು. ಇದೀಗ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಅಧಿಸೂಚನೆಯ ಪ್ರಕಾರ ಹೊಸ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದೆ.

ಪ್ರಧಾನ ಅರ್ಚಕರಾದ ಮುಂಚ್ಚಿತ್ತಾಯ ಸೇರಿದಂತೆ ಒಟ್ಟು 9 ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ಇದರಲ್ಲಿ ಈಗಾಗಲೇ 8 ಜನರನ್ನು ಆಯ್ಕೆ ಮಾಡಲಾಗಿದೆ. ಉಳಿದ 1 ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಬಾಕಿ ಇದೆ.

ಹೊಸ ಸಮಿತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಮೀಸಲಾತಿಯಿಂದ ಗುರುವ ಹಾರ, ಮಹಿಳಾ ಮೀಸಲಾತಿಯಿಂದ ಜೋತ್ಸ್ನ ಕುಮಾರಿ ಪಿಲತಿಂಜ ಮತ್ತು ಕುಸುಮಾವತಿ ಕೆಂಪಮುದೇಲು, ಸಾಮಾನ್ಯ ಪ್ರವರ್ಗದಿಂದ ಸುರೇಶ್ ನಾಯ್ಕ ಪರಂತಮೂಲೆ, ಬಾಬು ಪುತ್ಯೆಮಜಲು, ರಘುಲಾಲ್ ಪುತ್ಯೆ ಮತ್ತು ಆನಂದ ಗೌಡ ಪುತ್ಯೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ದೇವಾಲಯದ ಆಡಳಿತಾಧಿಕಾರಿಯಾಗಿದ್ದ ಕೊಕ್ಕಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೀಪಕ್ ಕುಮಾರ್ ಅವರ ಸಮ್ಮುಖದಲ್ಲಿ ಸಭೆ ನಡೆದಿದ್ದು, ಎಲ್ಲ ಸದಸ್ಯರು ಒಮ್ಮತದಿಂದ ಬಾಬು ಪುತ್ಯೆಮಜಲು ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿದರು.

  •  

Leave a Reply

error: Content is protected !!