

ನೆಲ್ಯಾಡಿ: ಕಡಬ ತಾಲೂಕಿನ ಸವಣೂರಿನಲ್ಲಿ ಆ.30ರಂದು ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ನೂಜಿಬಾಳ್ತಿಲ ಬೆಥನಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ.
ವಿದ್ಯಾರ್ಥಿನಿ ನಿಶಾ ಜಿ.ಎಸ್. (ದ್ವಿತೀಯ ವಾಣಿಜ್ಯ ವಿಭಾಗ) 800 ಮೀಟರ್ ಓಟದಲ್ಲಿ ಪ್ರಥಮ, 400 ಮೀಟರ್‌ನಲ್ಲಿ ದ್ವಿತೀಯ, 3000 ಮೀಟರ್‌ನಲ್ಲಿ ತೃತೀಯ ಸ್ಥಾನ, ಪ್ರಮೀಳಾ (ಪ್ರಥಮ ಕಲಾ ವಿಭಾಗ) 3000 ಮೀಟರ್ ಓಟದಲ್ಲಿ ಪ್ರಥಮ, 800 ಮೀ. ಮತ್ತು 1500 ಮೀಟರ್ ಓಟಗಳಲ್ಲಿ ತಲಾ ದ್ವಿತೀಯ ಸ್ಥಾನ, ಅಪೇಕ್ಷಾ (10ನೇ ತರಗತಿ) 400 ಮೀಟರ್‌ನಲ್ಲಿ ಪ್ರಥಮ, 100 ಮೀ. ಮತ್ತು 200 ಮೀಟರ್ ಓಟಗಳಲ್ಲಿ ದ್ವಿತೀಯ ಸ್ಥಾನ, ಮೋಕ್ಷಾ ಪಿ (10ನೇ ತರಗತಿ) 1500 ಮೀಟರ್ ಓಟದಲ್ಲಿ ಪ್ರಥಮ, 3000 ಮೀಟರ್‌ನಲ್ಲಿ ದ್ವಿತೀಯ, 800 ಮೀಟರ್‌ನಲ್ಲಿ ತೃತೀಯ ಸ್ಥಾನ, ಪ್ರೀತಿ ಆರ್ (9ನೇ ತರಗತಿ) 100, 200 ಮತ್ತು 400 ಮೀಟರ್ ಓಟಗಳಲ್ಲಿ ತಲಾ ತೃತೀಯ ಸ್ಥಾನ ಗಳಿಸಿದರು. ತಂಡ ಸ್ಪರ್ಧೆಯಲ್ಲಿ 4×100 ಮೀ. ರಿಲೇ (ಮಹಿಳೆಯರು) ಹಾಗೂ 4×400 ಮೀ. ರಿಲೇ (ಮಹಿಳೆಯರು) ಎರಡೂ ವಿಭಾಗಗಳಲ್ಲಿ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ, ವರ್ಷಿತ್ (10ನೇ ತರಗತಿ) 1500 ಮೀಟರ್‌ನಲ್ಲಿ ದ್ವಿತೀಯ, 10,000 ಮೀಟರ್‌ನಲ್ಲಿ ತೃತೀಯ ಸ್ಥಾನ, ನೋಯಲ್ (ಪ್ರಥಮ ಕಲಾ ವಿಭಾಗ) 100 ಮೀಟರ್ ಓಟದಲ್ಲಿ ಪ್ರಥಮ, 200 ಮೀಟರ್‌ನಲ್ಲಿ ತೃತೀಯ ಸ್ಥಾನ, ಯೋಗಿತ್ (9ನೇ ತರಗತಿ) 1500 ಮೀ. ಮತ್ತು 800 ಮೀಟರ್ ಓಟಗಳಲ್ಲಿ ತಲಾ ತೃತೀಯ ಸ್ಥಾನ, ಪ್ರಜ್ವಲ್ (8ನೇ ತರಗತಿ) 5000 ಮೀಟರ್ ಓಟದಲ್ಲಿ ತೃತೀಯ ಸ್ಥಾನ, 4×100 ಮೀ. ರಿಲೇ (ಬಾಲಕರು) ಹಾಗೂ 4×400 ಮೀ. ರಿಲೇ (ಬಾಲಕರು) ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಪಡೆದುಕೊಂಡರು
ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಸಂಚಾಲಕರು, ಪ್ರಾಂಶುಪಾಲರು, ಮುಖ್ಯ ಶಿಕ್ಷಕ ಹಾಗೂ ನಿರಂತರವಾಗಿ ತರಬೇತಿ ನೀಡಿ ಪ್ರೋತ್ಸಾಹ ನೀಡುತ್ತಿರುವ ದೈಹಿಕ ಶಿಕ್ಷಣ ಉಪನ್ಯಾಸಕರಾದ ಪುನೀತ್ ಕೆ ಮತ್ತು ಮತ್ತಾಯಿ ಓ. ಜೆ ಅವರಿಗೆ ವಿಶೇಷ ಅಭಿನಂದನೆಗಳು ಸಲ್ಲಿಸಲಾಯಿತು.










