
ನೆಲ್ಯಾಡಿ: ಹೊಸಮಜಲು – ಕೌಕ್ರಾಡಿ ಅಶ್ವಥ್ಥ ಗೆಳೆಯರ ಬಳಗ ಇದರ ವತಿಯಿಂದ ಸಮಿತಿ ಅಧ್ಯಕ್ಷರಾದ ವಂದನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ 2025ನೇ ಸಾಲಿನ ಗಣೇಶೋತ್ಸವದ ಲೆಕ್ಕಾಚಾರ ಹಾಗೂ 2025-26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಆ.31ರಂದು ರಚನೆಯಾಯಿತು.
ನೂತನ ಅಧ್ಯಕ್ಷರಾಗಿ ರೋಷನ್ ಬಿ ಜೆ, ಉಪಾಧ್ಯಕ್ಷರಾಗಿ ಸಂತೋಷ್ ಕಲಾಯಿ, ಕಾರ್ಯದರ್ಶಿಯಾಗಿ ಶೈಲೇಶ್ ಹೆಗ್ಡೆ, ಜೊತೆಗೆ ಕಾರ್ಯದರ್ಶಿಯಾಗಿ ರಂಜಿತ್ ಮಂಚಿ, ಕೋಶಾಧಿಕಾರಿಯಾಗಿ ಪ್ರಜ್ವಲ್ ಬಿ. ಗೌರವಾಧ್ಯಕ್ಷರಾಗಿ ಬಾಲಕೃಷ್ಣ ಬಾಣಜಾಲು ಅವರನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.










