

ನೆಲ್ಯಾಡಿ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1500ನೇ ಜನ್ಮದಿನದ ಪ್ರಯುಕ್ತ ನೆಲ್ಯಾಡಿ ಬದ್ರಿಯಾ ಜುಮ್ಮಾ ಮಸ್ಜಿದ್‌ನಲ್ಲಿ ವಿಜೃಂಭಣೆಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು.
ಬೆಳಿಗ್ಗೆ ಮಸ್ಜಿದ್ ಆವರಣದಲ್ಲಿ ನಡೆದ ಧ್ವಜಾರೋಹಣವನ್ನು ಮಸೀದಿಯ ಆಡಳಿತ ಕಮಿಟಿಯ ಅಧ್ಯಕ್ಷ ಎನ್.ಎಸ್. ಸುಲೇಮಾನ್ ನೆರವೇರಿಸಿ, ಹಾಜರಿದ್ದ ಎಲ್ಲಾ ಬಾಂಧವರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಧಾರ್ಮಿಕ ಪ್ರಾರ್ಥನೆಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಬಳಿಕ ನೆಲ್ಯಾಡಿ ಪೇಟೆಯಲ್ಲಿ ಬೃಹತ್ ಈದ್ ಮಿಲಾದ್ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ನೂರಾರು ಭಕ್ತರು ಉತ್ಸಾಹಭರಿತವಾಗಿ ಪಾಲ್ಗೊಂಡು ಸಂಭ್ರಮಿಸಿದರು. ಮೆರವಣಿಗೆ ಉದ್ದಕ್ಕೂ ಸ್ಥಳೀಯರು ಪರಸ್ಪರ ಸಿಹಿ ತಿಂಡಿ, ತಂಪು ಪಾನೀಯಗಳನ್ನು ಹಂಚಿಕೊಂಡು ಹಬ್ಬದ ಸಂತಸವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಸೀದಿಯ ಆಡಳಿತ ಕಮಿಟಿಯ ಅಧ್ಯಕ್ಷ ಎನ್.ಎಸ್. ಸುಲೇಮಾನ್, ಕಾರ್ಯದರ್ಶಿ ಎನ್. ಇಲ್ಯಾಸ್, ಕೋಶಾಧಿಕಾರಿ ಉಮ್ಮರ್ ತಾಜ್, ಖತೀಬರಾದ ಇಬ್ರಾಹಿಂ ಸಖಾಫಿ, ಕೌಕ್ರಾಡಿ ಗ್ರಾ.ಪಂ.ಸದಸ್ಯ ಹನೀಫ್ ಕರಾವಳಿ, ನೆಲ್ಯಾಡಿ ಗ್ರಾ.ಪಂ.ಸದಸ್ಯ ಅಬ್ದುಲ್ ಜಬ್ಬಾರ್, ಮಹಮ್ಮದ್ ಇಕ್ಬಾಲ್, ಆಡಳಿತ ಕಮಿಟಿಯ ಸದಸ್ಯರು ನೋಟರಿ ವಕೀಲ ಇಸ್ಮಾಯಿಲ್, ಇಸ್ಮಾಯಿಲ್ ಎಸ್.ಎಂ, ಮಾಜಿ ಅಧ್ಯಕ್ಷ ಹನೀಫ್ ಸಿಟಿ, ರಫೀಕ್ ಸೀಗಲ್, ಆಲ್ ಬದ್ರಿಯಾ ಸ್ಕೂಲ್ ಅಧ್ಯಕ್ಷ ನಾಝಿಮ್ ಸಾಹೇಬ್, ಮೊರಂಕಾಲ ನೂರುಲ್ ಹುದಾ ಮಸ್ಜಿದ್ ಮದರಸದ ಆಡಳಿತ ಕಮಿಟಿ ಅಧ್ಯಕ್ಷರು ಹಾಗೂ ಸದಸ್ಯರು, ಪಟ್ಟೆ ಬುಸ್ತಾನುಳ್ ಉಲುಮ್ ಮಸ್ಜಿದ್ ಮದರಸದ ಆಡಳಿತ ಕಮಿಟಿ ಅಧ್ಯಕ್ಷರು ಹಾಗೂ ಸದಸ್ಯರು, ನೆಲ್ಯಾಡಿ ಹಯಾತುಲ್ ಇಸ್ಲಾಂ ಮದರಸದ ಅಧ್ಯಾಪಕರು ಮುಂತಾದ ಗಣ್ಯರು ಭಾಗವಹಿಸಿದರು.






